ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂದುವರಿದ ವರುಣಾರ್ಭಟ!

rain
Published on

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಮುರ್ನಾಲ್ಕು ದಿನಗಳಿಂದ ನಗರದ ಹಲವೆಡೆ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ.

ಮಧ್ಯಾಹ್ನ ಮಾದವಾರ ಸೇರಿ ಕೆಲ ಪ್ರದೇಶಗಳಲ್ಲಿ ಬಿರುಸಾಗಿ ಮಳೆ ಬಿದ್ದರೆ, ಇನ್ನೂ ಕೆಲವೆಡೆ ಮೋಡ ಕವಿದ ವಾತಾವರಣ ಇತ್ತು. ರಾತ್ರಿ 11ಗಂಟೆಗೆ ಚಾಮರಾಜಪೇಟೆ, ಬಸವನಗುಡಿ, ವಿದ್ಯಾಪೀಠ, ಜೆ.ಪಿ.ನಗರ, ಜಯನಗರ, ಇಟ್ಟಮಡು, ಮೈಸೂರು ರಸ್ತೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ಲಾಲ್‌‌ಬಾಗ್ ಸೇರಿ ನಗರದ ಹಲವೆಡೆ ಗುಡುಗು ಸಹಿತ ವರುಣಾರ್ಭಟ ಜೋರಾಗಿತ್ತು. ರಸ್ತೆ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರಿಗೆ ತೊಂದರೆಯಾಯಿತು.‌

ಸತತ ಮಳೆಯಿಂದಾಗಿ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ರಾಜಧಾನಿಯಲ್ಲಿ ತಂಪಾದ ವಾತಾವರಣ ಕಂಡುಬರುತ್ತಿದೆ. ಮಾರ್ಚ್‌‌‌ನಿಂದ ವಾಡಿಕೆಗಿಂತ ಹೆಚ್ಚು ದಾಖಲಾಗುತ್ತಿದ್ದ ತಾಪಮಾನವೂ ಇಳಿಮುಖವಾಗುತ್ತಿದೆ. ರಾತ್ರಿ ವೇಳೆ ಸಖೆಯ ಅನುಭವ ಕಡಿಮೆಯಾಗಿದೆ.

ಸಾಧಾರಣ ಮಳೆ:  ನಗರದಲ್ಲಿ ಮುಂದಿನ 4ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಮೋಡ ಕವಿದ ವಾತಾವರಣ ಇರಲಿದ್ದು, ಚದರಿದಂತೆ ಮಳೆಯೂ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net