More

    ಸರ್ವಾಧಿಕಾರಿಯ ಮತ್ತೊಂದು ವಿಚಿತ್ರ ಆದೇಶ: ಉತ್ತರ ಕೊರಿಯಾದಲ್ಲಿ ರೆಡ್​ ಲಿಪ್​ಸ್ಟಿಕ್ ಬ್ಯಾನ್! ನಿಯಮ ಉಲ್ಲಂಘಿಸಿದರೆ…?

    ಉತ್ತರ ಕೊರಿಯಾ: ನಿಮಗೆ ಈಗಾಗಲೇ ತಿಳಿದಿದೆ. ಅದೇನೆಂದರೆ, ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಆಡಳಿತವಿದೆ. ಆಗಾಗ್ಗೆ ವಿಚಿತ್ರವಾದ ಆದೇಶಗಳಿಗೆ ಈ ದೇಶ ವಿಶ್ವದಲ್ಲಿ ಹೆಸರುವಾಸಿಯಾಗಿದೆ. ಇಂತಹದ್ದೇ ಒಂದು ವಿಚಿತ್ರ ಆದೇಶವನ್ನು ಕಿಮ್‌ ಜಾಂಗ್‌ ರೆಡ್​ ಲಿಪ್ ಸ್ಟಿಕ್ ಹೆಸರಿನಲ್ಲಿ ನೀಡಿದ್ದಾರೆ.

    ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟ ಗೆದ್ದರೆ ಮರುದಿನವೇ ಜೈಲಿನಿಂದ ಹೊರಬರುವೆ: ಅರವಿಂದ್ ಕ್ರೇಜಿವಾಲ್​

    ಅದರ ಪ್ರಕಾರ, ಯಾವುದೇ ಕಾರಣಕ್ಕೂ ದೇಶದಲ್ಲಿ ವಾಸಿಸುವ ಮಹಿಳೆಯರು ರೆಡ್​ ಲಿಪ್ ಸ್ಟಿಕ್ ಧರಿಸಲು ಕೊಳ್ಳುವಂತಿಲ್ಲ ಎಂದು ಕಿಮ್‌ ಜಾಂಗ್‌ ಉನ್‌ ಹೇಳಿದ್ದಾರೆ. ಒಂದು ವೇಳೆ ನಿಯಮ ಮೀರಿದರೆ ಜೈಲು ಪಾಲಾಗುವ ಸ್ಥಿತಿ ಬರಬಹುದು.

    ಉತ್ತರ ಕೊರಿಯಾ ರೆಡ್​​ ಲಿಪ್‌ಸ್ಟಿಕ್ ಅನ್ನು ಏಕೆ ನಿಷೇಧಿಸಿದೆ?

    ಕೆಂಪು ಬಣ್ಣವು ಕಮ್ಯುನಿಸಂನೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದ್ದರೂ ಕೂಡ ಉತ್ತರ ಕೊರಿಯಾ ಕೆಂಪು ಲಿಪ್ ಸ್ಟಿಕ್​ನ್ನು ನಿಷೇಧಿಸಿದೆ. ಏಕೆಂದರೆ ಅದನ್ನು ಇಲ್ಲಿನ ನಾಯಕತ್ವವು ಬಂಡವಾಳಶಾಹಿಯ ಸಂಕೇತವೆಂದು ಪರಿಗಣಿಸುತ್ತದೆ.ವಾಸ್ತವವಾಗಿ, ಉತ್ತರ ಕೊರಿಯಾದಲ್ಲಿ ಭಾರೀ ಮೇಕ್ಅಪ್ ಅನ್ನು ವಿರೋಧಿಸಲಾಗುತ್ತದೆ ಮತ್ತು ಪಾಶ್ಚಿಮಾತ್ಯ ಪ್ರಭಾವದ ಸಂಕೇತವಾಗಿ ನೋಡಲಾಗುತ್ತದೆ.

    ಸರ್ವಾಧಿಕಾರಿಯ ಮತ್ತೊಂದು ವಿಚಿತ್ರ ಆದೇಶ: ಉತ್ತರ ಕೊರಿಯಾದಲ್ಲಿ ರೆಡ್​ ಲಿಪ್​ಸ್ಟಿಕ್ ಬ್ಯಾನ್! ನಿಯಮ ಉಲ್ಲಂಘಿಸಿದರೆ...?

    ಮೇಕಪ್ ನಲ್ಲಿ, ಲಿಪ್ ಸ್ಟಿಕ್ ನ ಸ್ಪರ್ಶವಿಲ್ಲದಿದ್ದರೆ, ಮೇಕಪ್ ಅಪೂರ್ಣವಾಗಿರುತ್ತದೆ ಮತ್ತು ಇದು ಬೋಲ್ಡ್ ಮತ್ತು ಆಕರ್ಷಕ ನೋಟವನ್ನು ನೀಡುತ್ತದೆ. ಅದಕ್ಕಾಗಿಯೇ ಮಹಿಳೆಯರು ಲಿಪ್ ಸ್ಟಿಕ್ ಧರಿಸಲು ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಬಳಸಲು ಬಯಸುತ್ತಾರೆ. ಇಲ್ಲಿನ ಕಾನೂನಿನ ಪ್ರಕಾರ ಮಹಿಳೆಯರಿಗೆ ಕನಿಷ್ಠ ಮೇಕ್ಅಪ್ ಧರಿಸಲು ಅವಕಾಶವಿದೆ.

    ಮಹಿಳೆಯರು ಸ್ಕರ್ಟ್​ & ಜೀನ್ಸ್ ಧರಿಸುವಂತಿಲ್ಲ: ಉತ್ತರ ಕೊರಿಯಾದಲ್ಲಿ ಬಟ್ಟೆಗಳ ಮೇಲೂ ನಿರ್ಬಂಧವಿದೆ. ಮಹಿಳೆಯರು ಸಹ ಇಲ್ಲಿ ಸ್ಕರ್ಟ್‌ಗಳನ್ನು ಹಾಗು ಜೀನ್ಸ್‌ಗಳನ್ನು ಧರಿಸುವಂತಿಲ್ಲ. ಅಷ್ಟೇ ಅಲ್ಲ, ಬಿಕಿನಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಉತ್ತರ ಕೊರಿಯಾದ ಜನರು ವಿದೇಶಕ್ಕೆ ಹಾರುವಂತಿಲ್ಲ. ಒಂದು ವೇಳೆ ವಿದೇಶಗಳಿಗೆ ಹೋದರೆ ದೇಶದಿಂದ ಬಹಿಷ್ಕರಿಸಲಾಗುತ್ತದೆ.

    ಸರ್ವಾಧಿಕಾರಿಯ ಮತ್ತೊಂದು ವಿಚಿತ್ರ ಆದೇಶ: ಉತ್ತರ ಕೊರಿಯಾದಲ್ಲಿ ರೆಡ್​ ಲಿಪ್​ಸ್ಟಿಕ್ ಬ್ಯಾನ್! ನಿಯಮ ಉಲ್ಲಂಘಿಸಿದರೆ...?

    ಇಲ್ಲಿನ ಪುರುಷರು ಹಾಗೂ ಮಹಿಳೆಯರಿಗೆ ಕೂದಲು ಕತ್ತರಿಸುವುದರ ಬಗ್ಗೆ ಉತ್ತರ ಕೊರಿಯಾ 2013 ರಲ್ಲಿ ನಿಯಮಗಳನ್ನು ತಂದಿದೆ. ಅದರ ಪ್ರಕಾರ, ಪುರುಷರು ಮತ್ತು ಮಹಿಳೆಯರಿಗೆ ಹೇರ್ ಕಟ್‌ ಪಟ್ಟಿಯನ್ನು ಒಟ್ಟುಗೂಡಿಸಿದ್ದಾರೆ. ಮಹಿಳೆಯರು 18 ವಿಧಗಳಲ್ಲಿ ಮತ್ತು ಪುರುಷರು 10 ರೀತಿಯಲ್ಲಿ ತಮ್ಮ ಕೂದಲನ್ನು ಕತ್ತರಿಸಬಹುದು. ಒಂದು ವೇಳೆ ವಿಭಿನ್ನವಾದ ಹೇರ್ ಕಟ್‌ಗಳನ್ನು ಇಲ್ಲಿ ಮಾಡಿಕೊಂಡರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

    ಸರ್ವಾಧಿಕಾರಿಯ ಮತ್ತೊಂದು ವಿಚಿತ್ರ ಆದೇಶ: ಉತ್ತರ ಕೊರಿಯಾದಲ್ಲಿ ರೆಡ್​ ಲಿಪ್​ಸ್ಟಿಕ್ ಬ್ಯಾನ್! ನಿಯಮ ಉಲ್ಲಂಘಿಸಿದರೆ...?

    ನಿಯಮ ಉಲ್ಲಂಘಿಸಿದರೆ ?: ಒಂದು ವೇಳೆ ಇಲ್ಲಿನ ಕಾನೂನು ಉಲ್ಲಂಘಿಸಿದರೆ ಅವರನ್ನು ಶಿಕ್ಷಿಸಬಹುದು, ಜೊತೆಗೆ ದಂಡ ವಿಧಿಸಬಹುದು ಅಥವಾ ಸಾರ್ವಜನಿಕವಾಗಿ ನಿಲ್ಲಿಸಿ ಅವರ ಬಟ್ಟೆಗಳನ್ನು ಕತ್ತರಿಸಬಹುದು.

    ಮಳೆ, ಗಾಳಿ ಆರ್ಭಟಕ್ಕೆ ಹಳಿ ತಪ್ಪಿದ ಮುಂಬೈ ಮಹಾನಗರದ ಜನಜೀವನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts