ಆಪತ್‌ನಿಧಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲ

sor pu college
ಸೊರಬದ ಸರ್ಕಾರಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ರೀಡಾ, ಸಾಂಸ್ಕೃತಿಕ ಹಾಗೂ ರೆಡ್‌ಕ್ರಾಸ್ ವೇದಿಕೆಗಳನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ್ ಜೈನ್ ಉದ್ಘಾಟಿಸಿದರು. ಎಂ.ಸುರೇಶಪ್ಪ, ಡಾ. ವಿ.ಉಮೇಶ್, ವೀರೇಶ್ ಶಿಗ್ಗ ಇತರರಿದ್ದರು.
Published on

ಸೊರಬ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನಾಗರಾಜ್ ಜೈನ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕ್ರೀಡಾ, ಸಾಂಸ್ಕೃತಿಕ, ಸೇವಾದಳ, ಎನ್‌ಎಸ್‌ಎಸ್, ರೋವರ್ಸ್‌, ರೆಡ್‌ಕ್ರಾಸ್ ವೇದಿಕೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಕಾಲೇಜಿನಲ್ಲಿ ದೊರೆಯುತ್ತಿದ್ದು, ದಾಖಲಾತಿ ಪ್ರಮಾಣ ಕೂಡ ಚೆನ್ನಾಗಿದೆ. ಕಾಲೇಜಿನಲ್ಲಿ ಆರಂಭಿಸಿರುವ ಆಪತ್‌ನಿಧಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಎಂ.ಸುರೇಶಪ್ಪ ಮಾತನಾಡಿ, ಅನುಭವಿ ಉಪನ್ಯಾಸಕರ ಶ್ರಮದಿಂದ ಕಾಲೇಜಿನ ಫಲಿತಾಂಶ ಉತ್ತಮ ಆಗುತ್ತಿರುವುದು ಸಂತಸದ ಸಂಗತಿ. ಕಾಲೇಜು ಹಂತ ಹಂತವಾಗಿ ಪ್ರಗತಿ ಹೊಂದುತ್ತಿದೆ. ಆದರ್ಶ ವಿಜ್ಞಾನ ಕಾಲೇಜ್ ಮಂಜೂರಾಗಿದ್ದು, ಈಗಾಗಲೇ ಕಟ್ಟಡ, ಕಂಪ್ಯೂಟರ್ ದೊರೆತಿವೆ ಎಂದರು.
ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಉಪನ್ಯಾಸಕ ಡಾ. ವಿ.ಉಮೇಶ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವೀರೇಶ್ ಶಿಗ್ಗ, ಪುಷ್ಪಾ, ಉಪನ್ಯಾಸಕ ಡಿ.ವಿ.ಚಿದಾನಂದ, ಎನ್.ಕೆ.ಮಲ್ಲೇಶಪ್ಪ, ಎಚ್.ಎನ್.ಬಸವರಾಜ್, ವಿಜಯ್ ದಟ್ಟೇರ್, ವೈ.ರವಿ, ನೀಲಕಂಠ, ಪ್ರಜ್ವಲ್, ಮಲ್ಲೇಶ್, ಶರಾವತಿ, ನಯನಾ, ಭರತ್, ರವಿ ರೇವಣಪ್ಪ, ಪಿ.ಅಭಿಲಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net