

ಶಿಕಾರಿಪುರ: ಸಂವಿಧಾನ ದಿನಾಚರಣೆ ಪ್ರಯುಕ್ತ ತಾಲೂಕು ಆಡಳಿತ ಹಾಗೂ ಪುರಸಭೆಯಿಂದ ಮಂಗಳವಾರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಉಪ ತಹಸೀಲ್ದಾರ್ ವಿನಯ್ ಆರಾಧ್ಯ ಮಾತನಾಡಿ, ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದುದು. ಇಂದು ಜಗತ್ತಿನಲ್ಲಿ ಭಾರತದ ಸಂವಿಧಾನಕ್ಕೆ ಮಹತ್ವದ ಸ್ಥಾನವಿದೆ. ಬಹಳಷ್ಟು ದೇಶಗಳು ನಮ್ಮ ಸಂವಿಧಾನವನ್ನು ಆಧಾರವಾಗಿ ಇಟ್ಟುಕೊಂಡು ಸಂವಿಧಾನ ರಚಿಸಿಕೊಂಡಿವೆ. ಸಂವಿಧಾನದ ಬಲದಿಂದ ಕೋಟ್ಯಂತರ ಜನತೆ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ ಎಂದರು.
ಸಮಾಜ ಕಲ್ಯಾಣಾಧಿಕಾರಿ ಮಧುಸೂದನ್, ಉಪ ತಹಸೀಲ್ದಾರ್ ರವಿಕುಮಾರ್, ಪುರಸಭೆ ವ್ಯವಸ್ಥಾಪಕ ರಾಜ್‌ಕುಮಾರ್, ಸಮುದಾಯ ಸಂಘಟನಾಧಿಕಾರಿ ಸುರೇಶ್, ಕಂದಾಯ ನಿರೀಕ್ಷಕ ಅರುಣ್‌ಕುಮಾರ, ಸುರೇಶ್, ನೌಕರರ ಸಂಘದ ಅಧ್ಯಕ್ಷ ವೈ.ಪ್ರಸಾದ್, ರವಿಕುಮಾರ್, ಸುರೇಶ್, ಶ್ರೀನಿವಾಸ, ರಾಘವೇಂದ್ರ ಇತರರಿದ್ದರು.