ಬೊಮ್ಮಾಯಿ vs ಯತ್ನಾಳ್; ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ: ಕಾಂಗ್ರೆಸ್ ಟೀಕೆ!

congress
Published on

ಬೆಂಗಳೂರು: ರಾಜ್ಯ ಬಿಜೆಪಿ(State BJP) ನಾಯಕರಲ್ಲಿ ಮಾತಿನ ಸಮರ ನಡೆಯುತ್ತಿದೆ ಎಂದು ಉಲ್ಲೇಖಿಸಿ ಟ್ವೀಟ್(Tweet) ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯ ಪ್ರಮುಖ ನಾಯಕರ ಹೆಸರನ್ನು ಬಳಸಿ ಲೇವಡಿ ಮಾಡಿದೆ.

ಈ ಕುರಿತು ರಾಜ್ಯ ಕಾಂಗ್ರೆಸ್(State Congress) ಮಾಡಿರುವ ಟ್ವೀಟ್ ಹೀಗಿದೆ, "ಬೊಮ್ಮಾಯಿ ವಿರುದ್ಧ ಯತ್ನಾಳ್, ಯತ್ನಾಳ್ ವಿರುದ್ಧ ನಿರಾಣಿ, ಈಶ್ವರಪ್ಪ ವಿರುದ್ಧ ವಲಸಿಗರು, ಪ್ರತಾಪ್ ಸಿಂಹ ವಿರುದ್ಧ ಬೊಮ್ಮಾಯಿ, ಸೋಮಣ್ಣ ವಿರುದ್ಧ ಸಂತೋಷ್, ಸಿ.ಟಿ. ರವಿ ವಿರುದ್ಧ ಬಿಎಸ್​ವೈ" ನಡುವೆ ಜಟಾಪಟಿ ನಡೆಯುತ್ತಿದೆ ಎಂದು ಟ್ವೀಟ್​​ನಲ್ಲಿ ಹೇಳಿದೆ.

"ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ, ಮುಂದೆ ಆರ್​​ಎಸ್​​ಎಸ್​​ನವರ(RSS) ಲಾಠಿ ಕಸಿದುಕೊಂಡು ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ. ಚುನಾವಣೆಯ ಸೋಲಿನ ನಂತರ ಮರೆಗೆ ಸರಿದ ಜೋಶಿ-ಸಂತೋಷ್ ಜೋಡಿ ತೆರೆಯ ಹಿಂದೆ ಕುಳಿತು ಆಡಿಸುತ್ತಿರುವ ಗೊಂಬೆಯಾಟ ಇದು" ಎಂದು  ಬಿಜೆಪಿ ನಾಯಕರ ವಿರುದ್ಧ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net