ನಿಮ್ಮ ಕಾರ್ಯಕರ್ತರು ಎದ್ದಿದ್ದರಿಂದಲೇ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಿದ್ದು; ಆರ್​.ಅಶೋಕ್​ಗೆ ಕಾಂಗ್ರೆಸ್ ಟಾಂಗ್!

r ashok
Published on

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಎದ್ದರೆ ಕಾಂಗ್ರೆಸ್(Congress) ಧೂಳಿಪಟವಾಗಲಿದೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಆರ್.ಅಶೋಕ್(R Ashok) ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಇದೀಗ ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಈ ಬಗ್ಗೆ ಟ್ವೀಟ್(Tweet) ಮಾಡಿರುವ ರಾಜ್ಯ ಕಾಂಗ್ರೆಸ್, "ನಳೀನ್ ಕುಮಾರ್ ಕಟೀಲ್(Nalin Kumar Kateel) ಅವರೇ ನಿಮ್ಮ ಕಾರ್ಯಕರ್ತರು ಎದ್ದಿದ್ದರಿಂದಲೇ ನಿಮ್ಮ ಕಾರು ಅಲ್ಲಾಡಿದ್ದು, ನಿಮ್ಮ ಕಾರ್ಯಕರ್ತರು ಎದ್ದಿದ್ದರಿಂದಲೇ ಆರಗ ಜ್ಞಾನೇಂದ್ರ ಅವರ ಮನೆಗೆ ಕಲ್ಲು ಬಿದ್ದಿದ್ದು, ನಿಮ್ಮ ಕಾರ್ಯಕರ್ತರು ಎದ್ದಿದ್ದರಿಂದಲೇ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಿದ್ದು" ಎಂದು ಟ್ವೀಟ್ ಮಾಡಿದೆ.

"ಆರ್.ಅಶೋಕ್ ಅವರೇ, ನಿಮ್ಮ ಕಾರ್ಯಕರ್ತರಿಂದ ಮೊದಲೇ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ" ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಲೇವಡಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net