ದಿವಾಳಿಯಾಗಿದ್ದು ದೇಶವೂ ಅಲ್ಲ, ರಾಜ್ಯವೂ ಅಲ್ಲ ಬಿಜೆಪಿಗರ ಬೌದ್ಧಿಕತೆ!: ರಾಜ್ಯ ಕಾಂಗ್ರೆಸ್

bjp
congress slams bjp
Published on

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್(Congress) ಘೋಷಿಸಿದ 5 ಗ್ಯಾರಂಟಿಗಳನ್ನು(5 Guarantees) ಶೀಘ್ರವೇ ಜಾರಿಗೊಳಿಸಬೇಕು ಎಂದು ಈ ಹಿಂದೆ ಬಿಜೆಪಿ(BJP) ನೀಡಿದ್ದ ಹೇಳಿಕೆಗಳಿಗೆ ಇದೀಗ ರಾಜ್ಯ ಕಾಂಗ್ರೆಸ್ ಟ್ವೀಟ್ ಮುಖೇನ ತಿರುಗೇಟು ನೀಡಿದೆ.

"ಉದ್ಯೋಗ ಖಾತ್ರಿ ಕೊಟ್ಟಾಗ ದೇಶ ದಿವಳಿಯಾಗುತ್ತದೆ ಎಂದಿದ್ದರು. ಅನ್ನಭಾಗ್ಯ ಕೊಟ್ಟಾಗ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದರು. ಆದರೆ ದಿವಾಳಿಯಾಗಿದ್ದು ದೇಶವೂ ಅಲ್ಲ, ರಾಜ್ಯವೂ ಅಲ್ಲ ಬಿಜೆಪಿಗರ ಬೌದ್ಧಿಕತೆ! ಜನರಿಗೆ ನೀಡುವ ಹಣ, ಭೂಮಿಗೆ ಬಿತ್ತುವ ಬೀಜ ವ್ಯರ್ಥವಾಗುವುದಿಲ್ಲ, ಬೆಳೆದು ಮರವಾಗಿ ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ" ಎಂದು ಕಾಂಗ್ರೆಸ್ ಹೇಳಿದೆ.

"ಬದಲಾಗುವ ಬಿಜೆಪಿ ವರಸೆಗಳು, ಗ್ಯಾರಂಟಿ ಘೋಷಣೆ ಮಾಡಿದಾಗ, ಹಣ ಹೇಗೆ ಹೊಂದಿಸುತ್ತಾರೆ, ಜಾರಿ ಸಾಧ್ಯವಿಲ್ಲ, ಆರ್ಥಿಕತೆಯ ವಿರೋಧಿ. ಗ್ಯಾರಂಟಿ ಜಾರಿಯಾದಾಗ, ಕಂಡೀಷನ್ ಹಾಕ್ತಿದಾರೆ, ಎಲ್ಲರಿಗೂ ಕಳ್ಳೆಪುರಿ ಹಂಚಿದ ಹಾಗೆ ಹಂಚಬೇಕು! ಯಾವ ನಿಲುವು ತಾಳಬೇಕು, ಹೇಗೆ ವಿರೋಧಿಸಬೇಕು ಎಂದು ಗೊಂದಲದಲ್ಲಿದೆ ಬಿಜೆಪಿ. ಕನಿಷ್ಠ ಸ್ಪಷ್ಟವಾಗಿ ವಿರೋಧಿಸಲಾದರೂ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ ಬಿಜೆಪಿಗರೇ" ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್(Tweet) ಮೂಲಕ ಬಿಜೆಪಿಯ ಆರೋಪಗಳನ್ನು ತಳ್ಳಿ ಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net