More

    ಮಾವುಗಳಲ್ಲೇ ಸಿಕ್ಕಾಪಟ್ಟೆ ದುಬಾರಿ ಈ ‘ಮಿಯಾಝಾಕಿ’ ಮಾವು; ಕೆಜಿಗೆ ಬೆಲೆ ಎಷ್ಟಿದೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!

    ಪಶ್ಚಿಮ ಬಂಗಾಳ: ಮಿಯಾಝಾಕಿ(Miyazaki mango) ತಳಿಯ ಮಾವು ವಿಶ್ವದ ಅತ್ಯಂತ ದುಬಾರಿ(Costliest) ಮಾವು. ಈ ಮಾವು ಸಾಮಾನ್ಯವಾಗಿ ಜಪಾನ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

    ಇದನ್ನೂ ಓದಿ: https://www.vijayavani.net/ukraine-army-dances-for-natu-natu-song-mocking-russia

    ಮಿಯಾಝಾಕಿ ಮಾವು ಕೇವಲ ಜಪಾನ್​ನಲ್ಲಿ(Japan) ಮಾತ್ರ ಲಭ್ಯವಿದೆ ಎಂದು ತಿಳಿದಿದ್ದವರಿಗೆ ಅಚ್ಚರಿ ಸುದ್ದಿಯೊಂದು ಕೇಳಿಬಂದಿದೆ. ಈ ದುಬಾರಿ ತಳಿಯ ಮಾವು ಇದೀಗ ಭಾರದಲ್ಲೂ ಕೂಡ ಲಭ್ಯವಿದೆ! ಹೌದು, ಭಾರತದ ಪಶ್ಚಿಮ ಬಂಗಾಳದಲ್ಲಿ ಮಿಯಾಝಾಕಿ ಮಾವಿನ ಮರ ಕಂಡುಬಂದಿದೆ.


    ಪಶ್ಚಿಮ ಬಂಗಾಳದ(West Bengal) ದುಬ್ರಾಜ್‌ಪುರದಲ್ಲಿ ಸ್ಥಳೀಯರೊಬ್ಬರು ಎರಡು ವರ್ಷಗಳ ಹಿಂದೆ ಮಿಯಾಝಾಕಿ ಮಾವಿನ ಮರವನ್ನು ನೆಟ್ಟಿದ್ದರು. ನೆಟ್ಟಿದ ಸಂದರ್ಭದಲ್ಲಿ ಈ ಮಾವಿಗೆ ಇಷ್ಟೊಂದು ದುಬಾರಿ ಬೆಲೆ ಇದೆ ಎಂಬ ಸಂಗತಿ ಅವರಿಗೆ ತಿಳಿದಿರಲಿಲ್ಲ ಎಂಬುದು ವರದಿ ಮೂಲಕ ತಿಳಿದುಬಂದಿದೆ.

    ಇದನ್ನೂ ಓದಿ: https://www.vijayavani.net/mumbai-flyer-asked-to-pay-for-excess-baggage-claims-her-bag-has-bomb


    ಅಪರೂಪದ ಮಾವು ಈಗ ಭಾರತದಲ್ಲಿ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಕಂಡುಬಂದಿದ್ದು, ಇದರ ಬೆಲೆ ಕೆಜಿಗೆ 3 ಲಕ್ಷ ರೂ.! ದುಬ್ರಾಜ್‌ಪುರದ ಮಸೀದಿಯೊಂದರ ಬಳಿ ನೆಟ್ಟಿರುವ ಮಿಯಾಝಾಕಿ ಮಾವಿನ ಮರವು, ಪಶ್ಚಿಮ ಬಂಗಾಳದ ರಾಜ್ಯಾದ್ಯಂತ ಜನರನ್ನು ಆಕರ್ಷಿಸುತ್ತಿದೆ. ಜಪಾನ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಮಾವಿನ ವಿಧವನ್ನು ಪ್ರಧಾನವಾಗಿ ಗರಿಷ್ಠ ಸುಗ್ಗಿಯ ಸಮಯವಾದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಬೆಳೆಯಲಾಗುತ್ತದೆ.

    ಇದನ್ನೂ ಓದಿ: https://www.vijayavani.net/water-comes-in-petrol-bunk

    ಮಿಯಾಝಾಕಿ ಮಾವು ಹಣ್ಣಾಗುತ್ತಿದ್ದಂತೆ ವಿಶೇಷ ಬಣ್ಣವನ್ನು ಹೊಂದುತ್ತದೆ. ಆರಂಭದಲ್ಲಿ, ಅದರ ಬಣ್ಣ ನೇರಳೆ. ತನ್ನ ಗರಿಷ್ಠ ಪಕ್ವತೆಯನ್ನು ತಲುಪಿದ ನಂತರ, ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದು ಮಿಯಾಝಾಕಿ ಮಾವು ಅಂದಾಜು 350 ಗ್ರಾಂ ತೂಕ ತೂಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts