ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕ ಸಿಗುವ ಗ್ಯಾರಂಟಿಯೂ ಇಲ್ಲ!: ಬಿಜೆಪಿ ವಿರುದ್ಧ ಕಾಂಗ್ರೆಸ್ ಲೇವಡಿ

congress tweet
Published on

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್(Nalin Kumar Kateel) ಅವರು ರಾಜೀನಾಮೆ(Resignation) ಕೊಟ್ಟಿದ್ದಾರೆ ಎಂಬ ವದಂತಿ ಹಬ್ಬುತ್ತಿದ್ದಂತೆ ಇದೀಗ ರಾಜ್ಯ ಕಾಂಗ್ರೆಸ್(State Congress) ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಮೂಲಕ ಬಿಜೆಪಿ ನಾಯಕ ಮತ್ತು ಬಿಜೆಪಿ ಕುರಿತು ಟ್ವೀಟ್ ಮುಖೇನ ಲೇವಡಿ ಮಾಡಿದೆ.

ಈ ಬಗ್ಗೆ ಟ್ವೀಟ್(Tweet) ಮಾಡಿರುವ ಕಾಂಗ್ರೆಸ್, "ಸೋಲಿನ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಉಲ್ಟಾ ಹೊಡೆದಿದ್ದಾರಂತೆ. ನಾವು ಸರ್ಕಾರ ರಚಿಸಿದ್ದೂ ಆಯ್ತು, ನಮ್ಮ 5 ಗ್ಯಾರಂಟಿಗಳಲ್ಲಿ 2 ಗ್ಯಾರಂಟಿ ಜಾರಿ ಮಾಡಿದ್ದೂ ಆಯ್ತು. ಆದ್ರೆ, ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಅಧ್ಯಕ್ಷ ಹುದ್ದೆಯ ಗ್ಯಾರಂಟಿ ಇಲ್ಲ" ಎಂದು ಟ್ವೀಟ್ ಮಾಡಿದೆ.

"ಬಿಜೆಪಿ ಅವರಿಗೆ ವಿರೋಧ ಪಕ್ಷದ ನಾಯಕ ಸಿಗುವ ಗ್ಯಾರಂಟಿಯೂ ಇಲ್ಲ. ಹೀಗಿರುವಾಗ ನಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಅಲ್ಲವೇ ಬಿಜೆಪಿ?" ಎಂದು ಪ್ರಶಾರ್ಥಕ ಚಿಹ್ನೆ ಬಳಸುವ ಮೂಲಕ ಟ್ವೀಟ್ ಮಾಡಿ ಲೇವಡಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net