More

    ಪರರ ಪ್ರಾಣ ತೆಗೆಯಲು ಯೋಜನೆ ರೂಪಿಸಿ, ತನ್ನ ಪ್ರಾಣವನ್ನೇ ಕಳೆದುಕೊಂಡ..

    ಮುರ್ಷಿದಾಬಾದ್: ಬಾಂಬ್​ ಇಡಲು ಬಂದ ವ್ಯಕ್ತಿ ತಾನೇ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮಧ್ಯಂಪುರದಲ್ಲಿ ನಡೆದಿದೆ.

    ಇದನ್ನೂ ಓದಿ: ಆದಿಪುರುಷ್ ಚಿತ್ರದವರ ವಿರುದ್ಧ FIR ದಾಖಲಿಸಿ; ಅಮಿತ್ ಶಾಗೆ ಪತ್ರ ಬರೆದ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ!

    ಮೃತನನ್ನು ಅಲೀಮ್ ಶೇಖ್ ಎಂದು ಗುರುತಿಸಲಾಗಿದ್ದು, ಶನಿವಾರದಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನಹುನ್‌ಪಾರಾ ಹತ್ತಿರದ ಮಧ್ಯಂಪುರದಲ್ಲಿ ತನ್ನ ಗ್ಯಾಂಗ್​ ಜತೆಗೆ ಬಾಂಬ್​ ಇಡಲು ಬಂದಿದ್ದ.

    ಸೆಣಬಿನ ತೋಟಗಳಲ್ಲಿ ಬಾಂಬ್‌ಗಳನ್ನು ಇಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಒಂದು ಬಾಂಬ್‌ಗಳಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಪರಿಣಾಮವಾಗಿ ಹಲವರು ಗಂಭೀರವಾಗಿ ಗಾಯಗೊಂಡು, ಶೇಖ್​ ಮೃತಪಟ್ಟಿದ್ದಾನೆ. ಈ ಮೂಲಕ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೂ ಮುನ್ನ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

    ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಬಾಂಬ್ ಇಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದನ್ನು ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ. ಬೆಲ್ದಂಗ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಈಗಾಗಲೇ ಸೆಣಬಿನ ಗದ್ದೆಯಿಂದ ಸುಮಾರು 65 ಬಾಂಬ್‌ಗಳನ್ನು ಮತ್ತು ಮುರ್ಷಿದಾಬಾದ್‌ನಿಂದ 30ಕ್ಕೂ ಹೆಚ್ಚು ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮುಂಗಾರು ವಿಳಂಬ ಅನ್ನದಾತ ಕಂಗಾಲು; ದಶಕದಲ್ಲೇ ಹಿನ್ನೆಡೆ ಅನುಭವಿಸಿದ ವರ್ಷ 2023; ಒಂದು ಬೆಳೆ ಕೈತಪ್ಪುವ ಭೀತಿ

    ಬಂಗಾಳದಲ್ಲಿ ಜುಲೈ 8ರಂದು ಪಂಚಾಯತ್ ಚುನಾವಣೆಗಳು ನಡೆಯಲಿದ್ದು, ಜುಲೈ 11ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts