ಕಲಾಪದಲ್ಲಿ ಮೊಬೈಲ್ ನೋಡುತ್ತಿದ್ದ ಕಾಂಗ್ರೆಸ್​ ಸದಸ್ಯ! ಡಿಲೀಟ್​ ಮಾಡಿದ ಫೋಟೋ-ವಿಡಿಯೋ ಅಶ್ಲೀಲವೇ?

Prakash Rathod
Published on

ಬೆಂಗಳೂರು: ಇತ್ತ ವಿಧಾನಪರಿಷತ್​ ಕಲಾಪ ನಡೆಯುತ್ತಿದ್ದರೆ, ಅತ್ತ ಪ್ರತಿಪಕ್ಷ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಫೋಟೋ ನೋಡುತ್ತ ಡಿಲೀಟ್ ಮಾಡುವುದರಲ್ಲಿ ತಲ್ಲೀನರಾಗಿದ್ದ ಘಟನೆ ಶುಕ್ರವಾರ ಸಂಭವಿಸಿದೆ.

ಕಲಾಪದ ವೇಳೆ ಮೊಬೈಲ್​ನಲ್ಲಿ ಫೋಟೋ ವೀಕ್ಷಿಸಿದ್ದು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಪ್ರಕಾಶ್ ರಾಠೋಡ್, ನಾನು ನೂರಾರು ಗ್ರೂಪ್​ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಹೀಗಾಗಿ ಸ್ಟೋರೇಜ್ ಫುಲ್ ಆಗಿತ್ತು. ಅದನ್ನ ಡಿಲೀಟ್ ಮಾಡ್ತಿದ್ದೆ. ಅದು ಅಶ್ಲೀಲ ವಿಡಿಯೋನಾ? ಅನ್ನೋದೂ ನನಗೆ ಗೊತ್ತಿಲ್ಲ.. ನಾನು ಯಾವುದನ್ನೂ ನೋಡದೆ ಬಂದಿರುವ ಮೆಸೇಜ್ ಮತ್ತು ವಿಡಿಯೋ ಡಿಲೀಟ್ ಮಾಡ್ತಿದ್ದೆ ಎಂದರು. ಇದನ್ನೂ ಓದಿರಿ ಅಮ್ಮನೊಂದಿಗೆ ಸಾವಿನ ಮನೆಯ ಕದ ತಟ್ಟಿದ ಅಕ್ಕ-ತಮ್ಮ! ಮನಕಲಕುತ್ತೆ ಈ ಘಟನೆ

ನಾನು ಅಶ್ಲೀಲ ವಿಡಿಯೋ ನೋಡಿಲ್ಲ, ನೋಡೋದು ಇಲ್ಲ, ನೋಡುವ ಅವಶ್ಯಕತೆಯೂ ನನಗಿಲ್ಲ. ಪರಿಷತ್​ನಲ್ಲಿ ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕಿತ್ತು. ಕ್ಲಾರಿಫಿಕೇಷನ್ ಮೇಲೆ ಉತ್ತರ ಕೊಡುವಾಗ ಮಾಹಿತಿ ನೋಡುತ್ತಿದ್ದೆ. ಆಗ ಮೊಬೈಲ್ ಓಪನ್ ಆಗಿದೆ. ನನ್ನ ಮೊಬೈಲ್​ ಸ್ಟೋರೇಜ್​ ಫುಲ್​ ಆಗಿತ್ತು. ಹಾಗಾಗಿ ನಾನು ಯಾವುದನ್ನೂ ನೋಡದೆ ಬಂದಿರುವ ಮೆಸೇಜ್​ ಮತ್ತು ವಿಡಿಯೋ ಡಿಲೀಟ್ ಮಾಡ್ತಿದ್ದೆ. ನನಗೆ ಯಾರೂ ಅಶ್ಲೀಲ ವಿಡಿಯೋ ಕಳಿಸಿರಲಿಲ್ಲ ಎಂದು ಪ್ರಕಾಶ್ ರಾಥೋಡ್ ಸ್ಪಷ್ಟನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net