ಶಾಲಾ ಮಕ್ಕಳ ಕಿವಿ ಮೇಲೂ ಕಾಂಗ್ರೆಸ್ ಹೂವು ಇಡುತ್ತಿದೆ; ರಾಜ್ಯ ಬಿಜೆಪಿ ಟೀಕೆ!

bjp tweet war
Published on

ಬೆಂಗಳೂರು: ಪೋಷಕರೇ ಜಾಗೃತರಾಗಿ, ಶಾಲಾ ಮಕ್ಕಳ ಕಿವಿ ಮೇಲೂ ಕಾಂಗ್ರೆಸ್ ಹೂವು ಇಡುತ್ತಿದೆ ಎಂದು ರಾಜ್ಯ ಬಿಜೆಪಿ (State BJP) ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್ (Tweet) ಮಾಡಿರುವ ರಾಜ್ಯ ಬಿಜೆಪಿ (BJP),"ಅಂದು 1.0 ಟಿಪ್ಪು ಆಡಳಿತ! ಶಾಲಾ ಪ್ರವಾಸದಲ್ಲೂ ಜಾತಿ ವಿಷಬೀಜ, ಮೊಟ್ಟೆ ಕೊಡುವುದರಲ್ಲೂ ಜಾತಿ ಬಿತ್ತನೆ, ಕಲ್ಲಡ್ಕ ಶಾಲಾ ಮಕ್ಕಳ ಊಟಕ್ಕೂ ಕನ್ನ, ಇಂದು 2.0 ತುಘಲಕ್ ದರ್ಬಾರ್, ಮಕ್ಕಳಿಗೆ ನೀಡುವ ಮೊಟ್ಟೆ, ಬಾಳೆಹಣ್ಣಿಗೂ ಕತ್ತರಿ ಎಂದು ಟ್ವೀಟ್​ ಮಾಡಿದೆ.

ಶೂ, ಸಾಕ್ಸ್ ಅನುದಾನದಲ್ಲೂ ಕಡಿತ, ಪಠ್ಯಪುಸ್ತಕದಲ್ಲೂ ಎಡಬಿಡಂಗಿ ಸಿದ್ಧಾಂತದ ಹೇರಿಕೆ, ಶಾಲಾ ಮಕ್ಕಳ ಕಿವಿ ಮೇಲೂ ಕಾಂಗ್ರೆಸ್ (Congress) ಹೂವು ಇಡುತ್ತಿದೆ ಪೋಷಕರೇ ಜಾಗೃತರಾಗಿ ಎಂದು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net