ದೇಶದಲ್ಲಿ ಏಕರೂಪ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಕಾಂಗ್ರೆಸ್ ಶಾಸಕರ ಆಗ್ರಹ

cow-slaughter-ban-bill-pass
Published on

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ಕಾನೂನು ಇದೆ. ಆದರೆ, ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ದೇಶದಲ್ಲಿ ಗೋಹತ್ಯೆ ವಿಚಾರವಾಗಿ ಒಂದೇ ಮಾದರಿ ಕಾನೂನು ಜಾರಿಯಾಗಲಿ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ‌ ಚರ್ಚೆ ವೇಳೆ ಯು.ಟಿ ಖಾದರ್ ಮಾತನಾಡಿದರು.

ಗೋಹತ್ಯೆ ವಿಚಾರವಾಗಿ ಕರ್ನಾಟಕ, ಗೋವಾ, ಕೇರಳಕ್ಕೆ ಸಂಬಂಧಿಸಿ ಭಿನ್ನ ನಿಲುವುಗಳಿವೆ. ಇದರ ಬದಲು ಒಂದು ದೇಶ ಒಂದು ಕಾರ್ಡ್, ಒಂದು ದೇಶ ಒಂದು ಚುನಾವಣೆ ಮಾದರಿ ಒಂದೇ ಕಾನೂನು ಜಾರಿಯಾಗಲಿ. ದೇಶದಲ್ಲಿ ಈ ಬಗ್ಗೆ ಗೊಂದಲವೇಕೆ ಎಂದು ಪ್ರಶ್ನಿಸಿದರು. ಬಿಜೆಪಿಗೆ ನಿಜವಾದ ಗೋ ಕಾಳಜಿ ಇದ್ದರೆ ಗೋಮಾಂಸ ರಫ್ತು ಬ್ಯಾನ್ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಸದನದಲ್ಲಿ ಕಾಂಗ್ರೆಸ್​ ಶಾಸಕರು ದ್ವನಿಗೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net