ಹೊರ ರಾಜ್ಯಗಳ ಅಸೆಂಬ್ಲಿ ಎಲೆಕ್ಷನ್​ ಜವಾಬ್ದಾರಿ ವಹಿಸಿಕೊಂಡ ಕಾಂಗ್ರೆಸ್​ ನಾಯಕರು

congress
Published on

ಬೆಂಗಳೂರು: 2021ರಲ್ಲಿ ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಯಾ ಪಕ್ಷಗಳು ನಾಯಕರುಗಳಿಗೆ ಚುನಾವಣೆಯ ಜವಾಬ್ದಾರಿಯನ್ನು ವಹಿಸಿಕೊಡಲಾರಂಭಿಸಿದ್ದಾರೆ. ಕಾಂಗ್ರೆಸ್​ ಕೂಡ ಪಕ್ಷದ ನಾಯಕರುಗಳಿಗೆ ಚುನಾವಣೆಯ ಜವಾಬ್ದಾರಿ ಹಂಚಿದ್ದು, ರಾಜ್ಯದ ಮೂರು ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ.

ಅಸ್ಸಾಂ, ಕೇರಳ, ತಮಿಳುನಾಡು, ಪುದುಚೇರಿ ಮತ್ತ ಪಶ್ಚಿಮ ಬಂಗಾಳದಲ್ಲಿ ಈ ವರ್ಷ ವಿಧಾನ ಸಭಾ ಚುನಾವಣೆ ನಡೆಯಲಿದೆ. ಅದಕ್ಕೆಂದು ಐದೂ ರಾಜ್ಯಗಳ ಚುನಾವಣಾ ಜವಾಬ್ದಾರಿಗಳನ್ನು ಹಂಚಲಾಗಿದೆ. ಕರ್ನಾಟಕದ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಕೇರಳದ ಹಿರಿಯ ಚುನಾವಣಾ ವೀಕ್ಷಕರಾಗಿ ಜವಾಬ್ದಾರಿ ನೀಡಲಾಗಿದೆ. ವೀರಪ್ಪ ಮೊಯ್ಲಿಗೆ ತಮಿಳುನಾಡು, ಪುದುಚೇರಿ ಜವಾಬ್ದಾರಿ ಮತ್ತು ಪಶ್ವಿಮಬಂಗಾಳದ ಹಿರಿಯ ಚುನಾವಣಾ ವೀಕ್ಷಕರ ಜವಾಬ್ದಾರಿಯನ್ನು ಬಿ.ಕೆ.ಹರಿಪ್ರಸಾದ್ ಅವರಿಗೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net