

ದಿಸ್ಪುರ್: ಅಸ್ಸಾಂನ ಕರಿಗಂಜ್ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ(Bangladesh National Anthem) ಅಮರ್ ಸೋನಾರ್ ಬಾಂಗ್ಲಾ ಹಾಡಿದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ. ಅಲ್ಲದೆ, ಆಡಳಿತಾರೂಢ ಬಿಜೆಪಿ ಸರ್ಕಾರವು ಕಾಂಗ್ರೆಸ್ ಗ್ರೇಟರ್ ಬಾಂಗ್ಲಾದೇಶ ಮತ ಬ್ಯಾಂಕ್ ಸೃಷ್ಟಿಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದೆ.
ಸೋಮವಾರ ಶ್ರೀಭೂಮಿದಲ್ಲಿ ನಡೆದ ಕಾಂಗ್ರೆಸ್ ಸೇವಾ ದಳದ ಸಭೆಯ ವೇಳೆ ಘಟನೆ ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆದ ನಂತರ ರಾಜಕೀಯ ಕೋಲಾಹಲ ಭುಗಿಲೆದ್ದಿದೆ. ಅಲ್ಲದೆ, ಈ ಘಟನೆಯ ವಿರುದ್ಧ ಅನೇಕ ಆನ್ಲೈನ್ ಬಳಕೆದಾರರು ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಅಸ್ಸಾಂ ಸಚಿವ ಅಶೋಕ್ ಸಿಂಘಾಲ್, ಭಾರತದಿಂದ ಈಶಾನ್ಯವನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿರುವ ದೇಶದ ರಾಷ್ಟ್ರಗೀತೆ ಹಾಡಲು ಕಾಂಗ್ರೆಸ್ ಅನುಮತಿ ನೀಡಿದ್ದಕ್ಕಾಗಿ ವಾಗ್ದಾಳಿ ನಡೆಸಿದ್ದಾರೆ.
ಮತ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯದ ಜನಸಂಖ್ಯೆಯನ್ನು ಬದಲಾಯಿಸಲು ಮತ್ತು ಗ್ರೇಟರ್ ಬಾಂಗ್ಲಾದೇಶವನ್ನು ರಚಿಸಲು ಕಾಂಗ್ರೆಸ್ ದಶಕಗಳಿಂದ MIAಯ ಅಕ್ರಮ ಒಳನುಸುಳುಕೋರರನ್ನು ಏಕೆ ಅನುಮತಿಸುತ್ತಿದೆ ಮತ್ತು ಪ್ರೋತ್ಸಾಹಿಸುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ ಎಂದುಸಿಂಘಾಲ್ ಟೀಕಾಪ್ರಹಾರ ಮಾಡಿದ್ದಾರೆ.
ಅಲ್ಲದೆ, ಮುಂದುವರೆದು ಮಾತನಾಡಿದ ಸಿಂಘಾಲ್, ಕೆಲವು ದಿನಗಳ ಹಿಂದೆ, ಬಾಂಗ್ಲಾದೇಶವು ಇಡೀ ಈಶಾನ್ಯವನ್ನು ನುಂಗುವ ನಕ್ಷೆಯನ್ನು ಪ್ರಕಟಿಸಲು ಧೈರ್ಯ ಮಾಡಿತು. ಈಗ ಬಾಂಗ್ಲಾದೇಶಿಗಳು ಅಸ್ಸಾಂನಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಹೆಮ್ಮೆಯಿಂದ ಹಾಡುತ್ತಿದ್ದಾರೆ. ಇದರ ನಂತರ, ಯಾರಾದರೂ ಇನ್ನೂ ಕಾರ್ಯಸೂಚಿಯ ಅರ್ಥವನ್ನು ಅರ್ಥಮಾಡಿಕೊಳ್ಳದಿದ್ದರೆ, ಅವರು ಕುರುಡರು, ಪಾಲುದಾರರು ಅಥವಾ ಈ ಎರಡರ ಸಂಯೋಜನೆಯಾಗಿರಬೇಕು ಎಂದು ಕಿಡಿಕಾರಿದ್ದಾರೆ.
ಇಡೀ ಈಶಾನ್ಯವನ್ನು ನುಂಗುವ ನಕ್ಷೆಯ ಬಗ್ಗೆ ಪಕ್ಷವು ಉಲ್ಲೇಖಿಸಿದ್ದು, ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಇತ್ತೀಚೆಗೆ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವೆಂದು ತೋರಿಸುವ ವಿವಾದಾತ್ಮಕ ನಕ್ಷೆಯನ್ನು ಹೊಂದಿರುವ ಪುಸ್ತಕವನ್ನು ಬಾಂಗ್ಲಾಗೆ ಭೇಟಿ ನೀಡಿದ ಪಾಕಿಸ್ತಾನಿ ಜನರಲ್ಗೆ ಉಡುಗೊರೆಯಾಗಿ ನೀಡಿದ್ದನ್ನು ಉಲ್ಲೇಖಿಸಲಾಗಿದೆ.
ಈ ವೀಡಿಯೊಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವನ್ನು ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.(ಏಜೆನ್ಸೀಸ್)