

ನವದೆಹಲಿ: 2021-22ನೇ ಸಾಲಿನಲ್ಲಿ ಚುನಾವಣಾ ಟ್ರಸ್ಟ್ ಗಳು ರಾಜಕೀಯ ಪಕ್ಷಗಳಿಗೆ ನೀಡಿದ ಒಟ್ಟು ದೇಣಿಗೆಯಲ್ಲಿ ಬಿಜೆಪಿ - ರೂ 351.50 ಕೋಟಿ ಅಥವಾ ಶೇ. 72.17ರಷ್ಟು ಪಡೆದಿದ್ದರೆ, ಕಾಂಗ್ರೆಸ್ ಪಕ್ಷವು ಟಿಆರ್ಎಸ್, ಸಮಾಜವಾದಿ ಪಕ್ಷ, ಎಎಪಿ ಮತ್ತು ವೈಎಸ್ಆರ್ ಕಾಂಗ್ರೆಸ್ಗಿಂತ ಕಡಿಮೆ ಪಡೆದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.
2021-22ರಲ್ಲಿ ಚುನಾವಣಾ ಟ್ರಸ್ಟ್ನಿಂದ ಬಿಜೆಪಿಯು ಕಾಂಗ್ರೆಸ್ಗಿಂತ 10 ಪಟ್ಟು ಹೆಚ್ಚು ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಎಡಿಆರ್ ಡೇಟಾ ತಿಳಿಸಿದೆ. ಬಿಜೆಪಿಗೆ ಬಂದ ಒಟ್ಟು ದೇಣಿಗೆ ಇತರೆ 9 ಪಕ್ಷಗಳಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರೋರಲ್ ಟ್ರಸ್ಟ್ ಎಂಬುದು ಭಾರತದಲ್ಲಿ ಕಾರ್ಪೆರೇಟ್ ಘಟಕಗಳು ಮತ್ತು ವ್ಯಕ್ತಿಗಳಿಂದ ರಾಜಕೀಯ ಪಕ್ಷಗಳಿಗೆ ಕೊಡುಗೆಗಳನ್ನು ಕ್ರಮಬದ್ಧವಾಗಿ ಸ್ವೀಕರಿಸಲು ರೂಪುಗೊಂಡ ಲಾಭರಹಿತ ಸಂಸ್ಥೆಯಾಗಿದೆ.