ಬಿಜೆಪಿ ಮಾಜಿ ಸಿಎಂ ಅಶ್ಲೀಲ ಸಿಡಿ ರಿಲೀಸ್ ಬಗ್ಗೆ ಆನಂದ್ ನ್ಯಾಮಗೌಡ ಸ್ಫೋಟಕ ಹೇಳಿಕೆ!

ವಿಜಯವಾಣಿ (8)
Published on

ಬಾಗಲಕೋಟೆ: ಇಂದು ಜಿಲ್ಲೆಯ ಜಮಖಂಡಿಯಲ್ಲಿ ಮಾತನಾಡಿದ ಮಾಜಿ ಶಾಸಕ ಆನಂದ್​ ನ್ಯಾಮಗೌಡ, ಬಿಜೆಪಿ ಮಾಜಿ ಮುಖ್ಯಮಂತ್ರಿಯೊಬ್ಬರ ಅಶ್ಲೀಲ ಸಿಡಿ ಬಿಡುಗಡೆ ಆಗೋದಿದೆ. ಇವತ್ತು ಒಂದು ಹೊಸ ಸುದ್ದಿ ಬಂದಿದೆ. ಅದನ್ನು ನೀವು ಕೇಳಿದ್ದಿರೋ ಇಲ್ಲವೋ ನನಗೆ ಗೊತ್ತಿಲ್ಲ. ಆದ್ರೆ, ನಾನು ಮಾತ್ರ ಇವತ್ತೇ ಆ ಸುದ್ದಿ ಕೇಳಿದ್ದೀನಿ ಎಂದು ಒತ್ತಿ ಹೇಳಿದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ಅವರ ಒಂದು ಅಶ್ಲೀಲ‌ ಸಿಡಿ ಹೊರಗೆ ಬರೋದಿದೆ. ಆ ಅಶ್ಲೀಲ‌ ಸಿಡಿ ಭಾರತೀಯ ಜನತಾ ಪಾರ್ಟಿಯವನದ್ದೆ. ಶೀಘ್ರದಲ್ಲಿ ಬಿಡುಗಡೆಯಾಗುತ್ತದೆ ಅಂತ ಕೇಳ್ಪಟ್ಟಿದ್ದೀನಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟ ರಾಜ್ಯಪಾಲರ ನಡೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ನ್ಯಾಮಗೌಡ ಈ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net