ಶತಾಯುಷಿ ಮತದಾರರಿಗೆ ಅಭಿನಂದನೆ ಸಲ್ಲಿಕೆ

Congratulatory submission to centenary voters
Published on

ಸಿದ್ದಾಪುರ: ತಾಲೂಕಿನ ಶತಾಯುಷಿ ಮತದಾರರಾದ ಮುಗದೂರಿನ ಹಂಜಗಿಯ ಕನ್ನೆ ಹುಚ್ಚರಾಯ ನಾಯ್ಕ ಹಾಗೂ ವಾಜಗೋಡ ಗ್ರಾಮದ ಶೀಬಳಮನೆಯ ಮಂಜಮ್ಮ ಮಹಾಬಲೇಶ್ವರ ಹೆಗಡೆ ಅವರನ್ನು ಚುನಾವಣಾ ಅಯೋಗದ ನಿರ್ದೇಶನದಂತೆ ತಹಸೀಲ್ದಾರ ಎಂ.ಆರ್.ಕುಲಕರ್ಣಿ ಹಾಗೂ ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಅವರು ಮನೆಗೆ ಭೇಟಿ ನೀಡಿ ಅಭಿನಂದಿಸಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು, ಊರಿನ ಹಿರಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net