VIDEO| ಮಣಿಪುರ ಗಲಭೆ ಕುರಿತು ಪ್ರಧಾನಿ ಮೋದಿ ಮೌನವಾಗಿದ್ದೇಕೆ: ಮಲ್ಲಿಕಾರ್ಜುನ ಖರ್ಗೆ

PM Modi and Mallikarjuna Kharge
Published on

ನವದೆಹಲಿ: 26 ವಿಪಕ್ಷಗಳ ಮಹಾಮೈತ್ರಿಕೂಟ I.N.D.I.Aವನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರತಿಕ್ರಿಯಿಸಿದ್ದು, ಏಕಂದರೆ ಅವರು ಭಾರತವನ್ನು ದ್ವೇಷಿಸಲು ಶುರು ಮಾಡಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ತಿರುಗೇಟು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಸಭೆ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ, ಪ್ರಧಾನಿ ಮೋದಿ ಈಸ್ಟ್​ ಇಂಡಿಯಾ ಕಂಪನಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂಸತ್​ ಅಧಿವೇಶನ ಶುರುವಾಗಿ ನಾಲ್ಕು ದಿನಗಳು ಕಳೆದಿದ್ದು, ಮಣಿಪುರದಲ್ಲಿ ಆದ ಗಲಭೆ ಕುರಿತು ಚರ್ಚಿಸಲು ಅವಕಾಶ ನೀಡಬೇಕೆಂದು ಕೋರಿ ಸಂಸದರು ನಿಯಮ 267ರ ಅಡಿಯಲ್ಲಿ ನೋಟಿಸ್​ ನೀಡಿದ್ದಾರೆ. ನಾವೆಲ್ಲರೂ ಮಣಿಪುರದ ಬಗ್ಗೆ ಕಳವಳ ಹೊಂದಿದ್ದರೆ. ಪ್ರಧಾನಿ ಮೋದಿ ಮಾತ್ರ ಈಸ್ಟ್​ ಇಂಡಿಯಾ ಕಂಪನಿ ಕುರಿತು ಮಾತನಾಡುತ್ತಿದ್ದಾರೆ.

ಸದನದೊಳಗೆ ಪ್ರಧಾನಿ ಮೋದಿ ಏಕೆ ಮಣಿಪುರದ ಬಗ್ಗೆ ಹೇಳುತ್ತಿಲ್ಲ. ಆದರೆ, ಸದನದ ಹೊರಗೆ ಈಸ್ಟ್​ ಇಂಡಿಯಾ ಕಂಪನಿ ವಿರುದ್ಧ ಮಾತನಾಡುವ ಅವರು ಮಣಿಪುರದ ಕುರಿತು ಯಾಕೆ ಮೌನ ವಹಿಸಿದ್ದಾರೆ. ಮಣಿಪುರದ ಸ್ಥಿತಿಗತಿ ಕುರಿತು ಪ್ರಧಾನಿ ಮೋದಿ ಉಭಯ ಸದನಗಳಲ್ಲಿ ಸಮಗ್ರವಾದ ಹೇಳಿಕೆಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಅಹಂ ತೊರೆದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಮಣಿಪುರದಲ್ಲಿ ನಡೆಯುತ್ತಿರುವ ಘರ್ಷಣೆ ಸಂಬಂಧ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ರಾಜ್ಯಸಭೆ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net