More

    ನಮ್ಮನ್ನು ಏನು ಬೇಕಾದರೂ ಕರೆಯಿರಿ ಮಿಸ್ಟರ್​ ಮೋದಿ; ಪ್ರಧಾನಿ ಹೇಳಿಕೆಗೆ ರಾಹುಲ್​ ಗಾಂಧಿ ತಿರುಗೇಟು

    ನವದೆಹಲಿ: 26 ವಿಪಕ್ಷಗಳ ಮಹಾಮೈತ್ರಿಕೂಟ I.N.D.I.Aವನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರತಿಕ್ರಿಯಿಸಿದ್ದು, ನೀವು ನಮ್ಮನ್ನು ಏನು ಬೇಕಾದರೂ ಕರೆಯಿರಿ ಎಂದು ತಿರುಗೇಟು ನೀಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಾವು INDIA ನೀವು ನಮ್ಮನ್ನು ಏನು ಬೇಕಾದರು ಕರೆಯಿರಿ ಮಿಸ್ಟರ್​ ಮೋದಿ. ನಾವು ಮಣಿಪುರದಲ್ಲಿ ಆಗಿರುವ ಗಲಭೆಯನ್ನು ಸರಿಪಡಿಸಿ ಅಲ್ಲಿನ ಜನತೆಯ ಕಣ್ಣಿರನ್ನು ಒರಸುತ್ತೇವೆ. ನಾವು ಅಲ್ಲಿನ ಜನತೆಗೆ ಪ್ರೀತಿ ಮತ್ತು ಶಾಂತಿಯನ್ನು ಮರಳಿ ತರುತ್ತೇವೆ ಎಂದಿದ್ದಾರೆ.

    ಇದನ್ನೂ ಓದಿ: ಶಾಸಕ ಮುನಿರತ್ನಗೆ ಶಾಕ್​ ನೀಡಿದ ಡಿಕೆ ಬ್ರದರ್ಸ್​​; RRನಗರ ಕ್ಷೇತ್ರದಲ್ಲಿ ಆಪರೇಷನ್​ ಹಸ್ತ

    ಇತ್ತ ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅನೇಕ ನಾಯಕರು ನಿಯಮ 267ರ ಅಡಿಯಲ್ಲಿ ನೋಟಿಸ್​ ನೀಡುತ್ತಿದ್ದಾರೆ. ನಾವು ಮಣಿಪುರದ ಬಗ್ಗೆ ಚರ್ಚಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಈಸ್ಟ್​ ಇಂಡಿಯಾ ಕಂಪನಿ ಕುರಿತು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಮಣಿಪುರ ಹಿಂಸಾಚಾರ ಸಂಬಂಧ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿರುವ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದಿದ್ದು, ಇಂಡಿಯಾ ಹೆಸರನ್ನು ಬಳಸಿದ ಮಾತ್ರಕ್ಕೆ ಕೆಲಸ ಆಗುವುದಿಲ್ಲ. ಈಸ್ಟ್​ ಇಂಡಿಯಾ ಕಂಪನಿ ಕೂಡ ಇಂಡಿಯಾ ಹೆಸರನ್ನು ಬಳಸಿತ್ತು ಮತ್ತು ಇಂಡಿಯನ್​ ಮುಜಾಹಿದ್ದೀನ್​​​ (ಉಗ್ರ ಸಂಘಟನೆ)ನಲ್ಲೂ ಇಂಡಿಯಾ ಇದೆ ಎಂದು ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts