ಈಶಾನ್ಯ ಮಾನ್ಸೂನ್ ಪ್ರಾರಂಭಕ್ಕೆ ಪೂರಕ ವಾತಾವರಣ: 16ರಿಂದ ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆ- Conditions favorable

ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್, ಕರ್ನಾಟಕ ಮತ್ತು ಆಂಧ್ರಪ್ರದೇಶ ವ್ಯಾಪ್ತಿಯ ಅಲ್ಲಲ್ಲಿ ಅ.15ರಿಂದ ಅ.19ರವರೆಗೆ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಹವಾಮಾನ ಇಲಾಖೆ ಮುನ್ಸೂಚನೆ
ರಾಜ್ಯದಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
Published on: 

ಬೆಂಗಳೂರು: (Conditions favorable for the onset of the Northeast Monsoon) ಮುಂದಿನ 2-3 ದಿನಗಳಲ್ಲಿ ಕರ್ನಾಟಕ ಸೇರಿ ದೇಶದ ಉಳಿದ ಭಾಗಗಳಿಂದ ನೈಋತ್ಯ ಮಾನ್ಸೂನ್ ಮತ್ತಷ್ಟು ನಿರ್ಗಮಿಸಲು ಮತ್ತು ಅದೇ ಸಮಯದಲ್ಲಿ ಈಶಾನ್ಯ ಮಾನ್ಸೂನ್ (ಹಿಂಗಾರು) ಶುರುವಾಗಲು ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ.

ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್, ಕರ್ನಾಟಕ ಮತ್ತು ಆಂಧ್ರಪ್ರದೇಶ ವ್ಯಾಪ್ತಿಯ ಅಲ್ಲಲ್ಲಿ ಅ.15ರಿಂದ ಅ.19ರವರೆಗೆ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ,ಬೆಂ.ದಕ್ಷಿಣ, ಮೈಸೂರು, ಚಾಮರಾಜನಗರದಲ್ಲಿ ಅ.16 ರಿಂದ ಮುಂದಿನ 3 ದಿನ ಹಾಗೂ ಬೆಳಗಾವಿ, ಕೊಪ್ಪಳ, ಧಾರವಾಡ, ಗದಗ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನದಲ್ಲಿ ಅ.17ರಿಂದ ಅ.19ವರೆಗೆ ಗುಡುಗು ಸಹಿತ ಜೋರು ಮಳೆಯಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ಕೊಡಲಾಗಿದೆ.

Also Read
ಇಎಸ್‌ಐಎಸ್ ಕಾಯಂ ನೌಕರರಿಗೆ ಸಿಕ್ಕಿಲ್ಲ ಸೆಪ್ಟೆಂಬರ್ ವೇತನ: ಕುಟುಂಬ ನಿರ್ವಹಣೆಗೆ ಪರದಾಟ- ESIS Employee salary delay
ಹವಾಮಾನ ಇಲಾಖೆ ಮುನ್ಸೂಚನೆ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿಯಲ್ಲಿ ಅ.18ರಿಂದ ಮುಂದಿನ 2 ದಿನ ಮತ್ತು ಕೊಡಗಿನಲ್ಲಿ ಅ.18ರಂದು ಯೆಲ್ಲೋ ಅಲರ್ಟ್ ಇರಲಿದೆ.

ಮುಂದಿನ 3 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಅ.15ಕ್ಕೆ ಮುಂಗಾರು ಕೊನೆಗೊಳ್ಳಲಿದ್ದು, ಅ.16ರಿಂದ ಹಿಂಗಾರು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಮತ್ತು ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ವರುಣನ ಆಗಮನವಾಗುವ ನಿರೀಕ್ಷೆ ಇದೆ.

- ಸಿ.ಎಸ್.ಪಾಟೀಲ್, ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net