ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಏಕಾಗ್ರತೆ ಮುಖ್ಯ

IAS
ಯುಪಿಎಸ್‌ಸಿ ಸಾಧಕ ವಿ.ವಿಕಾಸ್ ಅವರನ್ನು ಸಾಗರದಲ್ಲಿ ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಮೈತ್ರಿ ಪಾಟೀಲ್, ಸವಿತಾ ವಾಸು, ಎಚ್.ಕೆ.ನಾಗಪ್ಪ, ವಿ.ಸಿ.ಪಾಟೀಲ್ ಇತರರಿದ್ದರು.
Published on

ಸಾಗರ: ಸ್ಪರ್ಧಾತ್ಮಕ ಪರೀಕ್ಷೆಗಳು ಅತ್ಯಂತ ಕಠಿಣವಾಗಿರುತ್ತದೆ. ಅದರಲ್ಲಿ ಯಶಸ್ವಿಯಾಗಲು ಬದ್ಧತೆ ಹಾಗೂ ಏಕಾಗ್ರತೆ ಅಗತ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 288ನೇ ರ‌್ಯಾಂಕ್ ಗಳಿಸಿದ ವಿ.ವಿಕಾಸ್ ಅವರಿಗೆ ಪುರಭವನದಲ್ಲಿ ಸೋಮವಾರ ನಗರಸಭೆಯಿಂದ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುವುದು ಯುವ ಜನರಿಗೆ ಸ್ಫೂರ್ತಿ. ಯುವ ಸಾಧಕರಿಗೆ ಕರ್ನಾಟಕ ರಾಜ್ಯದಲ್ಲಿ ಸೇವೆ ಸಲ್ಲಿಸಲು ಹೆಚ್ಚು ಅವಕಾಶ ಸಿಗಬೇಕು ಎಂದು ತಿಳಿಸಿದರು.

ಐಎಎಸ್ ಅಧಿಕಾರಿಗಳು ಆರಂಭದಲ್ಲಿ ಉತ್ತಮ ಕೆಲಸ ಮಾಡುತ್ತಾರೆ. ಕೆಲ ವರ್ಷದ ನಂತರ ದರ್ಪ ತೋರಿಸುತ್ತಾರೆ. ಅಂತಹ ಅವಕಾಶ ಕೊಡದೆ ದೇಶದ ಯಾವುದೇ ರಾಜ್ಯದಲ್ಲಿ ಕೆಲಸ ಮಾಡಿದರೂ ಕರ್ನಾಟಕ ರಾಜ್ಯ ಮತ್ತು ಸಾಗರ ಕ್ಷೇತ್ರವನ್ನು ಮರೆಯಬೇಡಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ವಿಕಾಸ್, ನಾನು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಯಲ್ಲ. ಇಂಜಿನಿಯರಿಂಗ್ ಮುಗಿಸಿ ಡಿಅರ್‌ಡಿಒನಲ್ಲಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು 288ನೇ ರ‌್ಯಾಂಕ್ ಬಂದಿದ್ದೇನೆ. ಸಾಧನೆಗೆ ಪಾಲಕರು, ಡಿಆರ್‌ಡಿಒದಲ್ಲಿ ಕೆಲಸ ಮಾಡುವ ಐಎಎಸ್ ಅಧಿಕಾರಿಗಳು, ಗುರುಹಿರಿಯರ ಮಾರ್ಗದರ್ಶನ ಕಾರಣ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ವಿ.ಸಿ.ಪಾಟೀಲ್, ಮಹಾಲಕ್ಷ್ಮೀ ಹೆಗಡೆ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net