

ಚೌಳಹಿರಿಯೂರು: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ, ಸಮಯಪಾಲನೆ, ಏಕಾಗ್ರತೆ ಹೊಂದಿರಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್.ರಾಜಪ್ಪ ತಿಳಿಸಿದರು.
ಗ್ರಾಮದ ಡಾ. ಅಂಬೇಡ್ಕೆರ್ ವಸತಿ ಶಾಲಾ ಆವರಣದಲ್ಲಿ ಅಂತರಘಟ್ಟೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಡೂರು ಬಿಇಒ ಆರ್.ಸಿದ್ದರಾಜ ನಾಯಕ್, ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ಇಂತಹ ವೇದಿಕೆಗಳು ಸಹಕಾರಿ. ತೀರ್ಪುಗಾರರು ನ್ಯಾಯಯುತ ತೀರ್ಪು ನೀಡಿ ಸಮರ್ಥ ಪ್ರತಿಭೆಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ವಸತಿಶಾಲೆ ಪ್ರಾಚಾರ್ಯ ಧನರಾಜ್ ಮಾತನಾಡಿ, ಚೌಳಹಿರಿಯೂರಿನಲ್ಲಿ ಯಾವುದೇ ಕಾರ್ಯಕ್ರಮ ಮಾಡದರೂ ಗ್ರಾಮಸ್ಥರ ಸಲಹೆ, ಸಹಕಾರದಿಂದ ಯಶಸ್ವಿಯಾಗಿ ನಡೆಸಿಕೊಡುತ್ತಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಅನಿತಾ ಮಲ್ಲೇಶಪ್ಪ, ಮಾಜಿ ಅಧ್ಯಕ್ಷರಾದ ಮಲ್ಲೇಶಪ್ಪ, ಶಿವಶಂಕರ್, ವಸತಿ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಘು, ಅಧ್ಯಕ್ಷೆ ದೀಪಾ, ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ಲಿಂಗರಾಜ್, ಮಂಜನಾಯ್ಕ, ತಿಮ್ಮಪ್ಪ, ತಿಪ್ಪೇಶ್, ನಿಲಯದ ಪಾಲಕ ಸೋಮೇಶ್ವರಸ್ವಾಮಿ ಪ್ರಸನ್ನ ಇತರರಿದ್ದರು.