ಕಂಪ್ಯೂಟರ್​ ಶಿಕ್ಷಣ ಮಕ್ಕಳಿಗೆ ವರದಾನ

Published on

ಪಾತಪಾಳ್ಯ: ಗ್ರಾಮೀಣ ವಿದ್ಯಾರ್ಥಿಗಳು ಮಿತಿಗಳ ನಡುವೆಯೂ ವಿಶಾಲ ಜಗತ್ತಿಗೆ ತೆಗೆದುಕೊಳ್ಳುವ ಪ್ರಬಲ ಸಾಂದ್ರತೆ ಕಂಪ್ಯೂಟರ್​ ಆಧಾರಿತ ಶಿಕ್ಷಣಕ್ಕಿದೆ ಎಂದು ಟೆಕ್ನಿಕಲ್​ ಫೆಸಿಲಿಟೇಟರ್​ ಆರ್​.ವಿ.ನವತೇಜ್​ ತಿಳಿಸಿದರು.ಬಿಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಇಂಡಿಯ ಲಿಟ್ರಸಿ ಪ್ರೊಜೆಕ್ಟ್​ ವತಿಯಿಂದ ಆಯೋಜಿಸಿದ್ದ ಶಿಕ್ಷಕರಿಗೆ ಕಂಪ್ಯೂಟರ್​ ತರಬೇತಿ ಮಾತನಾಡಿ, ಕಂಪ್ಯೂಟರ್​ ಬಳಕೆಯ ತರಬೇತಿ ಪಡೆದ ಶಿಕ್ಷಕರು ಸ್ವತ@ ವಿಡಿಯೋ ಹಾಗೂ ಇನ್ನಿತರ ಡಿಜಿಟಲ್​ ಸಂಪನ್ಮೂಲಗಳನ್ನು ಸಿದ್ಧಪಡಿಸಿ, ಶಾಲೆಗಳಲ್ಲಿ ಬಳಸುತ್ತಿದ್ದಾರೆ. ಶಿಕ್ಷಕರು ಬಳಸಿದ ಸಂಪನ್ಮೂಲಗಳ ಗುಣಮಟ್ಟ ಪರಿಶೀಲಿಸಿ ಉತ್ತಮವಾದವುಗಳನ್ನು ದೀಕ್ಷಾ ಪೋರ್ಟಲ್​ಗೆ ಅಪ್​ಲೋಡ್​ ಮಾಡಲಾಗುತ್ತದೆ. ಇದರಿಂದ ಶಾಲಾ ಹಂತದಲ್ಲಿ ಕಂಪ್ಯೂಟರ್​ ಬೆಂಬಲಿತ ಕಾರ್ಯಕ್ರಮದ ಯಶಸ್ವಿ ಅನುಷ್ಠಾನ ಗ್ರಾಮೀಣ ಮಕ್ಕಳಿಗೆ ವರದಾನವಾಗಬಲ್ಲದು ಎಂದರು.

ತರಬೇತಿಯಲ್ಲಿ ಟೂಲ್​ ಕವರೆಡ್​, ಟುಕ್​ಪಾಯಿಟ್​, ಕೆನಗ್ರಾಮ್​, ಕಿಯೋಗ್ರಾಫಿ, ಕಲಜಿಮ್​ ಹೇಳಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net