ಸಮರ್ಪಕ ವಿದ್ಯುತ್ ಪೂರೈಸಲು ಒತ್ತಾಯ

skp mescom
ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಸಾಲೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಶಿಕಾರಿಪುರ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಘವೇಂದ್ರ ನಾಯಕ್, ಹನುಮಂತಪ್ಪ, ಶೇಖರ್‌ನಾಯ್ಕ, ಚರಣ್, ಕುಮಾರ ಇತರರಿದ್ದರು.
Published on

ಶಿಕಾರಿಪುರ: ಸಾಲೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲವೆಂದು ಆರೋಪಿಸಿ ವಿವಿಧ ಗ್ರಾಮಗಳ ಜನರು ಮೆಸ್ಕಾಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು

ಮೆಸ್ಕಾಂ ಅಧಿಕಾರಿಗಳಿಗೆ ಜನಪರ ಮತ್ತು ರೈತರ ಪರವಾದ ಕಾಳಜಿಯಿಲ್ಲ. ಕಳೆದ 12 ದಿನಗಳಿಂದ ಸಾಲೂರು, ಎರೆಕೊಪ್ಪ, ಹರಿಹರಪುರ, ಗೊಬ್ಬರಹೊಂಡ, ಅಂಬ್ಲಿಗೊಳ, ಚಿಕ್ಕಸಾಲೂರು, ಚಿಕ್ಕಾಪುರ, ಕಲ್ಲೊಡ್ಡು ಗ್ರಾಮಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಾಗಿಲ್ಲ ಎಂದು ಕೆಡಿಪಿ ಸದಸ್ಯ ರಾಘವೇಂದ್ರ ನಾಯಕ್ ದೂರಿದರು.

ವಿದ್ಯುತ್ ವ್ಯತ್ಯಯದಿಂದ ಅಡಕೆ, ಬಾಳೆ ತೋಟಗಳು, ಬೇಸಿಗೆ ಭತ್ತ, ಮೆಕ್ಕೆಜೋಳ, ತರಕಾರಿ ಬೆಳೆಗಳು ಒಣಗುತ್ತಿವೆ. ಈ ಬಗ್ಗೆ ರೈತರು ಅಧಿಕಾರಿಗಳನ್ನು ಮುಖತಃ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಇಷ್ಟೊಂದು ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಇಲ್ಲದೆ ರೈತರು ಪರದಾಡುತ್ತಿದ್ದರೂ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಿರ್ಲಕ್ಷೃ ಇದೇ ರೀತಿ ಮುಂದುವರಿದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಸಾಲೂರು ಗ್ರಾಪಂ ಅಧ್ಯಕ್ಷ ಹನುಮಂತಪ್ಪ, ಶೇಖರ್‌ನಾಯ್ಕ, ಮಂಜುನಾಯ್ಕ, ರವಿನಾಯ್ಕ, ಜಮಾಲುದ್ದೀನ್, ಚರಣ್, ಹನುಮಂತಪ್ಪ, ನಾಗರಾಜನಾಯ್ಕ, ಕುಮಾರ, ರಾಮಾನಾಯ್ಕ, ಮಾಲತೇಶ್, ರಾಜ, ಶಂಕರನಾಯ್ಕ, ಸೋಮಾನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net