'ಮುಂದುವರಿದ ಅಧ್ಯಾಯ' ಸಿನಿಮಾ ತಂಡದಿಂದ ಫಿಲ್ಮ್ ಚೇಂಬರ್​ಗೆ ದೂರು! ನಟ ಆದಿತ್ಯ ಗರಂ

munduvarida adhyaya
Published on

ಬೆಂಗಳೂರು: ಯೂಟ್ಯೂಬ್ ಫೇಜ್ ರಿವ್ಯೂವರ್ಸ್ ವಿರುದ್ಧ 'ಮುಂದುವರಿದ ಅಧ್ಯಾಯ' ಚಿತ್ರತಂಡ ಫಿಲ್ಮ್ ಚೇಂಬರ್​ಗೆ ದೂರು ನೀಡಿದೆ.

ನಿನ್ನೆ ಯೂಟ್ಯೂಬ್ ಫೇಜ್ ರಿವ್ಯೂವರ್ಸ್ ವಿರುದ್ಧ ಕಿಡಿಕಾರಿದ್ದ ನಟ ಆದಿತ್ಯ, ನನ್ನ ಸಿನಿಮಾ ಬಗ್ಗೆ ವಿಮರ್ಶೆ ಮಾಡಲು ನಿಮಗೇನು ಯೋಗ್ಯತೆ ಇದೆ? ಯಾರು ನಿಮಗೆ ಹಕ್ಕು ಕೊಟ್ಟದ್ದು? ದಿನಪತ್ರಿಕೆಗಳ ಸೀನಿಯರ್​ ಜರ್ನಲಿಸ್ಟ್​ಗಳೇ ನನ್ನ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆದ್ರೆ ನೀವುಗಳು ಹಣಕ್ಕಾಗಿ ನನ್ನ ಸಿನಿಮಾ ಬಗ್ಗೆ ಇಲ್ಲಸಲ್ಲದ್ದನ್ನು ಏಕೆ ಬರೆಯುತ್ತೀರಿ? ನಿಮಗೆ ಕೆಲ್ಸ ಇಲ್ಲ ಅಂದ್ರೆ ಬನ್ನಿ ಕೊಡ್ತೀವಿ ಎಂದು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿರಿ ತನಿಖೆ ವೇಳೆ ಬಯಲಾಯ್ತು ಸಿಡಿ ಗ್ಯಾಂಗ್​ನ ತಂತ್ರ! ಇದು ಎಕ್ಸ್​ಕ್ಲೂಸಿವ್​ ಮಾಹಿತಿ

ಇಂದು(ಮಂಗಳವಾರ) ಬೆಳಗ್ಗೆ ಫಿಲ್ಮ್ ಚೇಂಬರ್​ಗೆ ಆಗಮಿಸಿದ ನಟ ಆದಿತ್ಯ, ನಿರ್ದೇಶಕ ಬಾಲು ಚಂದ್ರಶೇಖರ್ ಮತ್ತಿತರರು 'ಮುಂದುವರಿದ ಅಧ್ಯಾಯ' ಚಿತ್ರದ ಬಗ್ಗೆ ಇಲ್ಲಸಲ್ಲದ ರಿವ್ಯೂ ನೀಡಿ ಪ್ರೇಕ್ಷಕರಿಗೆ ಬ್ಯಾಡ್ ಒಪಿನೀಯನ್ ಕ್ರಿಯೇಟ್ ಮಾಡ್ತಿರೋ ಯೂಟ್ಯೂಬರ್ಸ್ ವಿರುದ್ಧ ದೂರು ನೀಡಿದರು.

ಮಾ19ರಂದು ರಾಜ್ಯಾದ್ಯಂತ 'ಮುಂದುವರೆದ ಅಧ್ಯಾಯ' ಸಿನಿಮಾ ರಿಲೀಸ್​ ಆಗಿದೆ. ಟ್ರೇಲರ್ ಹಾಗೂ ಕಂಟೆಂಟ್​ನಿಂದಲೇ ಈ ಸಿನಿಮಾ ಗಮನ ಸೆಳೆದಿದೆ. ಪ್ರತಿಷ್ಟಿತ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ನಮ್ಮ ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಆದರೆ ಕೆಲ ಯೂಟ್ಯೂಬ್ ವಿಮರ್ಶಕರು ಏನೂ ತಿಳಿದುಕೊಳ್ಳದೆ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದಾರೆ. ಪರಿಣಾಮ ಪ್ರೇಕ್ಷಕರ ಮನಸ್ಸಿನಲ್ಲಿ ದುಷ್ಪರಿಣಾಮ ಉಂಟಾಗಿ ನಮ್ಮ "ಮುಂದುವರಿದ ಅಧ್ಯಾಯ" ಸಿನಿಮಾಗೆ ಕೋಟ್ಯಂತರ ರೂ. ನಷ್ಟವಾಗಿದೆ. ಈ ನಷ್ಟವನ್ನು ಇವರುಗಳಿಂದಲೇ ಭರಿಸಿಕೊಡಬೇಕು ಹಾಗೂ ಈ ಕೂಡಲೇ ಈ ಚಾನಲ್‌ಗಳನ್ನು ನಿಷ್ಕ್ರಿಯೆಗೊಳಿಸಬೇಕು ಎಂದು ಲಿಖಿತ ರೂಪದಲ್ಲಿ ದೂರು ನಟ ಆದಿತ್ಯ ದೂರು ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆದಿತ್ಯ, ಯೂಟ್ಯೂಬ್ ನಲ್ಲಿ ಕೆಲವರು ಎಲ್ಲಾ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ವಿಮರ್ಷೆ ನೀಡ್ತಿದ್ದಾರೆ. ಅವರ್ಯಾರು ರೆಪ್ಯೂಟೆಡ್ ಜರ್ನಲಿಸ್ಟ್ ಅಲ್ಲ. ಅವರಿಗೆ ವಿಮರ್ಶೆ ಕೊಡೋ ಹಕ್ಕು ಸಹ ಇಲ್ಲ. ಇದೊಂದು ಯೂಟ್ಯೂಬ್​ನಲ್ಲಿ ಮಾಫಿಯಾ ಆಗ್ಬಿಟ್ಟಿದೆ. ಹೀಗಾದ್ರೆ ನಿರ್ಮಾಪಕರ ಗತಿ ಏನು ಪ್ರಶ್ನಿಸಿದರು.

ಯೂಟ್ಯೂಬ್ ವಿಮರ್ಶೆ ಮಾಡೋದ್ರಿಂದ ಕನ್ನಡ‌ ಸಿನಿಮಾಗೆ ಸಮಸ್ಯೆ ಆಗಿದೆ. ನಮ್ಮ ಸಿನಿಮಾ‌ ಮಾತ್ರವಲ್ಲ ಸಾಕಷ್ಟು ಸಿನಿಮಾಗೆ ಹೀಗೆ ಆಗಿದೆ. ಸಿನಿಮಾ‌ ರಿಲೀಸ್​ಗೂ ಮುಂಚೆ ಕಾಲ್ ಮಾಡಿ ವಿಮರ್ಶೆ ಮಾಡ್ತಿವಿ ಗಿಫ್ಟ್ ಸಿಗುತ್ತಾ ಅಂತ ಕೇಳಿದ್ರು. ಆಗಲ್ಲ ಅಂದಿದ್ವಿ. ಈಗ ನೆಗೆಟಿವ್ ಮಾಡಿದ್ದಾರೆ. ಜೋಕರ್ ಮುಖ ಹಾಕೊಂಡು ವಿಮರ್ಶೆ ಮಾಡ್ತಾನೆ. ಅವನಿಗೆ ಮುಖ ತೋರಿಸೋ ಧೈರ್ಯ ಇಲ್ಲ. 5 ಜನ ಇದ್ದಾರೆ. ಅವರ ಡೀಟೈಲ್ಸ್ ಕೊಟ್ಟಿದ್ದೀವಿ ಎಂದರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net