

ಶಿಕಾರಿಪುರ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಜನ್ಮದಿನಾಚರಣೆ ಅಂಗವಾಗಿ ಉಳ್ಳಿ ೌಂಡೇಶನ್‌ನಿಂದ ಚುರ್ಚಿಗುಂಡಿ ಮುರಾರ್ಜಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷಾ ಸಾಮಗ್ರಿ ವಿತರಿಸಲಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಂತೆಯೇ ಜನಪರ ಕಾರ್ಯ ಮಾಡುತ್ತಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಮಾಜದ ಎಲ್ಲ ವರ್ಗ, ಧರ್ಮಗಳನ್ನು ಪ್ರೀತಿಸುತ್ತಾರೆ ಎಂದು ೌಂಡೇಶನ್ ಅಧ್ಯಕ್ಷ ಉಳ್ಳಿ ದರ್ಶನ್ ಹೇಳಿದರು. ಸರ್ಕಾರಿ ಶಾಲೆ ಮಕ್ಕಳು ಖಾಸಗಿ ಶಾಲೆ ಮಕ್ಕಳಿಗೆ ಪೈಪೋಟಿ ನೀಡಿ ಉತ್ತಮ ಸ್ಥಾನ ಪಡೆಯುತ್ತಿರುವುದು ಶ್ಲಾಘನೀಯ. ಅವರಿಗೆ ಪರೀಕ್ಷಾ ಸಾಮಗ್ರಿ ವಿತರಿಸುವ ಮೂಲಕ ಅಲ್ಪ ಸೇವೆ ಮಾಡಿದ್ದು, ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಪಾಲಾಕ್ಷಪ್ಪ ಗೌಡ, ಸುರೇಶ್, ನಾಗರಾಜ್, ಶ್ರೀಕಾಂತ್, ಶಶಾಂಕ್, ಪರಶುರಾಮ್ ಇತರರಿದ್ದರು.