ಪೆಟ್ರೋಲ್​, ಡೀಸೆಲ್ ಬೆಲೆ ಜನಸಾಮಾನ್ಯರ ಮೇಲೇನೂ ಪರಿಣಾಮ ಬೀರಿಲ್ಲ: ಪೆಟ್ರೋಲಿಯಂ ಸಚಿವರ ವಿವರಣೆ

Petrol price
Published on: 

ನವದೆಹಲಿ: ಕಳೆದ 23 ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 22 ಸಲ ಏರಿಕೆಯಾಗಿದ್ದು, ಕಾಂಗ್ರೆಸ್​ ನಾಯಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಿಗೆ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೇನೂ ಪರಿಣಾಮ ಬೀರಿಲ್ಲ ಎಂದು ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಇದರಂತೆ, ಕರೊನಾ ವೈರಸ್ ಲಾಕ್​ಡೌನ್​ ಕಾರಣಕ್ಕೆ ಏಪ್ರಿಲ್​ ಮತ್ತು ಮೇ ತಿಂಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆ ಶೇಕಡ 70 ಕುಸಿದಿದೆ. ಆದಾಗ್ಯೂ, ಆರ್ಥಿಕ ಚಟುವಟಿಕೆ ನಿಧಾನವಾಗಿ ಶುರುವಾದಂತೆ ಇವುಗಳ ಬೇಡಿಕೆಯೂ ನಿಧಾನವಾಗಿ ಏರಿಕೆಯಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಾಮನ್​ ಮ್ಯಾನ್ ಮೇಲೆ ಪರಿಣಾಮವೇನೂ ಬೀರಿಲ್ಲ ಎಂದು ಸಚಿವ ಪ್ರಧಾನ್ ವಿವರಣೆ ನೀಡಿದ್ದಾರೆ.

ಕುಟುಂಬವೊಂದು ಸಮಸ್ಯೆ ಬಂದಾಗ, ಅದನ್ನು ಮುನ್ನಡೆಸುವ ವ್ಯಕ್ತಿ ಬಹಳ ಜಾಗರೂಕತೆಯಿಂದ ಹಣಕಾಸಿನ ವ್ಯವಸ್ಥೆಯನ್ನು ಸರಿದೂಗಿಸುವುದಿಲ್ಲವೆ? ಭವಿಷ್ಯದ ಸವಾಲುಗಳನ್ನು ಎದುರಿಸುವುದಕ್ಕಾಗಿ ಇಂತಹ ಕ್ರಮಗಳು ಅನಿವಾರ್ಯ. ಇಂಧನ ದರ ಏರಿಕೆಯನ್ನೂ ಇದೇ ದೃಷ್ಟಿಯಿಂದ ನೋಡಬೇಕು. ಇಂಧನ ಮೇಲೆ ಹೇರಿದ ತೆರಿಗೆ ಹಣವನ್ನು ದೇಶದ ಜನರ ಆರೋಗ್ಯ, ಉದ್ಯೋಗ ಮತ್ತು ಆರ್ಥಿಕ ಸುರಕ್ಷತೆಗಾಗಿಯೇ ಬಳಸಲಾಗುತ್ತಿದೆ. ಎಂದು ಪ್ರಧಾನ್ ವಿವರಿಸಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಸ್ಕೀಮ್ ಅನ್ನು ಪರಿಚಯಿಸಿದ್ದು ಅದರ ಮೂಲಕ ದೇಶದ ಅರ್ಥವ್ಯವಸ್ಥೆಗೆ 1.7 ಲಕ್ಷ ಕೋಟಿ ರೂಪಾಯಿಯ ವಿವಿಧ ಯೋಜನೆಗಳನ್ನು ಬಡವರು ಮತ್ತು ಕೃಷಿಕರಿಗೆ ಒದಗಿಸಲಾಗುತ್ತಿದೆ. ಕಾಂಗ್ರೆಸ್​ನವರಿಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರರು ಬಡ ಜನರ ಏಳಿಗೆಗೆ ತೆಗೆದುಕೊಂಡ ಕ್ರಮವನ್ನು ಸಹಿಸುತ್ತಿಲ್ಲ ಎಂಬುದು ವೇದ್ಯವಾಗುತ್ತಿದೆ ಎಂದು ಪ್ರಧಾನ್ ಕುಟುಕಿದರು. (ಏಜೆನ್ಸೀಸ್​)

Related Stories

Microsoft 365
An Amritsar court has granted a one-day parole to MP Amritpal Singh, currently lodged in Assam's Dibrugarh jail, to attend his grandmother's funeral.
Jensen Huang has resigned as CEO of Nvidia amidst allegations of an extramarital affair and espionage; a statement now issued by the US Attorney General has caused a stir in the tech world.
Ramayana