

ಉತ್ತರಾಖಂಡ: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭೂಕುಸಿತ ಸೇರಿದಂತೆ ಪ್ರವಾಹ ಭೀತಿ ಸೃಷ್ಟಿಯಾಗಿ, ಅನೇಕರು ಸಾವನ್ನಪ್ಪಿದ ಘಟನೆಗಳು ಕಳೆದ ದಿನಗಳಲ್ಲಿ ವರದಿಯಾಗಿದೆ. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಸಂಭವಿಸಿದ್ದು, ಡೆಹ್ರಾಡೂನ್ನಲ್ಲಿ ನೋಡ ನೋಡುತ್ತಿದ್ದಂತೆ ಕಾಲೇಜಿನ ಕಟ್ಟಡವೊಂದು ಕುಸಿದ ಬಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಉತ್ತರಾಖಂಡ ಭಾರೀ ಮಳೆಗೆ ತತ್ತರಿಸಿದ್ದು, ವರದಿಗಳ ಪ್ರಕಾರ ಭೂಕುಸಿತ ಸೇರಿದಂತೆ ಮಳೆಯ ಘಟನೆಗಳಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪ್ರವಾಹದ ಪರಿಸ್ಥಿತಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡ್ಡಗಾಡು ಪ್ರದೇಶದಲ್ಲಿ ನಿರಂತರ ಮಳೆಯಿಂದ ಭಾರೀ ತೊಂದರೆಗಳು ಎದುರಾಗಿದ್ದು, ಇದೀಗ ಡೆಹ್ರಾಡೂನ್ನ ಕಾಲೇಜಿನ ಕಟ್ಟಡದ ಒಂದು ಭಾಗವು ಕುಸಿದು ಬಿದ್ದಿದ್ದು, ರಭಸವಾಗಿ ಹರಿಯುವ ಹೊಳೆಯಲ್ಲಿ ಕೊಚ್ಚಿ ಹೋಗಿದೆ.
ಈ ಮಧ್ಯೆ ಹವಾಮಾನ ಇಲಾಖೆಯಿಂದ ಡೆಹ್ರಾಡೂನ್ ಮತ್ತು ನೈನಿತಾಲ್ ಸೇರಿದಂತೆ ಉತ್ತರಾಖಂಡದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಅನ್ನು ಘೋಷಿಸಿದೆ,(ಏಜೆನ್ಸೀಸ್).