ನಟ ಉಪೇಂದ್ರಗೆ ನೋಟಿಸ್​ ಜಾರಿ; ತಕ್ಷಣ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ ಪೊಲೀಸರು

Untitled design - 2023-08-14T105746.462
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಉಪೇಂದ್ರ ಅವರ ಆಕ್ಷೇಪಾರ್ಹ ಹೇಳಿಕೆ ಹಿನ್ನಲೆ ಸಿ.ಕೆ. ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿತ್ತು. ತದನಂತರ ಹಲಸೂರು ಪೊಲೀಸ್​ ಸ್ಟೇಷನ್​ನಲ್ಲಿ ಕೂಡ ಮತ್ತೊಂದು ದೂರು ದಾಖಲಾಗಿದ್ದು, ಇದೀಗ ಪೊಲೀಸರು ನಟನ ಮನೆಗೆ ನೋಟಿಸ್​ ನೀಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ತಕ್ಷಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ರವಾನಿಸಲಾಗಿದೆ. ಉಪೇಂದ್ರ ಅವರ ಕತ್ರಿಗುಪ್ಪೆ ಮತ್ತು ಸದಾಶಿವನಗರ ನಿವಾಸಕ್ಕೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇದರೊಟ್ಟಿಗೆ ವಾಟ್ಸ್ ಆ್ಯಪ್ ಮೂಲಕ ಕೂಡ ನೋಟಿಸ್ ಕಳುಹಿಸಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ವಿಡಿಯೋ ಮಾಡಿದ ಸ್ಥಳ ಮಹಜರು ಮಾಡಲಿದ್ದಾರೆ ಎಂದು ಹೇಳಲಾಗಿದೆ.

ನಟನ ವಿರುದ್ದ ಎರಡು ಎಫ್ಐಆರ್ ದಾಖಲಾದ ಹಿನ್ನಲೆ ಎರಡನೇ ಎಫ್ಐಆರ್ ಸಿ.ಕೆ. ಅಚ್ಚುಕಟ್ಟು ಠಾಣೆಗೆ ವರ್ಗಾವಣೆಯಾಗಲಿದೆ. ಪೊಲೀಸರು ಉಪೇಂದ್ರ ಅವರ ದೂರವಾಣಿ ಸಂಖ್ಯೆಯ ವಾಟ್ಸ್​ ಆ್ಯಪ್​ಗೂ ನೋಟಿಸ್ ರವಾನಿಸಿದ್ದಾರೆ. ಆದ್ರೆ, ಅವರ ಮೊಬೈಲ್ ಸ್ವಿಚ್ಡ್ ಆಫ್ ಆದ ಕಾರಣ ಮನೆಗೆ ನೋಟಿಸ್​ ಕಳುಹಿಸಲಾಗಿದೆ.

ನೋಟಿಸ್​​ನಲ್ಲಿ ಇಂದು (ಆಗಸ್ಟ್​ 14) 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಉಲ್ಲೇಖಿಸಲಾಗಿದೆ. ಆದ್ರೆ, ಇಲ್ಲಿಯವರೆಗೂ ನಟ  ಉಪೇಂದ್ರ ಅವರು ವಿಚಾರಣೆಗೆ ಲಭ್ಯವಾಗಿಲ್ಲ. ಪೊಲೀಸರು ಇನ್ನೂ ಎರಡು ಬಾರಿ ನೋಟಿಸ್​ ನೀಡಲಿದ್ದಾರೆ. ತದನಂತರವೂ ವಿಚಾರಣೆಗೆ ಹಾಜರಾಗದಿದ್ದರೇ, ಬಂಧನದ ಸಾಧ್ಯತೆ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net