ಚಿಕ್ಕಬಳ್ಳಾಪುರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಸ್ನಾತಕ ಪದವಿ ಪರೀಕ್ಷೆಗಳ ವೇಳೆ ವಿಚಕ್ಷಣಾ ಜಾಗೃತ ದಳ ನಿಯೋಜನೆ ವಿಚಾರವಾಗಿ ಅತಿಥಿ ಉಪನ್ಯಾಸಕರನ್ನು ಕೈ ಬಿಟ್ಟಿರುವುದಕ್ಕೆ ಜಿಲ್ಲಾ ಅತಿಥಿ ಉಪನ್ಯಾಸಕರ ಸಂವು ಅಸಮಾಧಾನ ವ್ಯಕ್ತಪಡಿಸಿದೆ.
ಸ್ನಾತಕ ಪದವಿಯ 6ನೇ ಸೆಮಿಸ್ಟರ್ ಪರೀಕ್ಷೆಗಳು ಜೂ.9, 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳು ಜೂ.14ರಿಂದ ಪ್ರಾರಂಭವಾಗಲಿವೆ. ಈಗಾಗಲೇ ಪ್ರತಿ ಜಿಲ್ಲೆಗೆ ವಿಚಕ್ಷಣಾ ಜಾಗೃತ ದಳ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ, ಕಾಲೇಜಿಗೆ ಒಬ್ಬರಂತೆ ನುರಿತ ಕಾಯಂ ಸಿಬ್ಬಂದಿಯನ್ನು ನೇಮಿಸುವಂತೆ ಮೌಲ್ಯವಾಪನ ಕುಲಸಚಿವರು ವಿವಿ ವ್ಯಾಪ್ತಿಯ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಇಲ್ಲಿನ ಪತ್ರಿಕಾಭವನದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂದ ಅಧ್ಯಕ್ಷ ಎಂ.ಮುನಿರಾಜು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲಿನಿಂದಲೂ ಮೌಲ್ಯವಾಪನ, ಪರೀಕ್ಷಾ ಕಾರ್ಯಗಳಲ್ಲಿ ಅತಿಥಿ ಉಪನ್ಯಾಸಕರು ತೊಡಗುತ್ತಿದ್ದಾರೆ. ಇದರ ನಡುವೆ ರಾಜ್ಯದ ಯಾವುದೇ ವಿವಿಯು ೋಷಿಸದ ಆದೇಶವನ್ನು ಬೆಂಗಳೂರು ಉತ್ತರ ವಿವಿ ಹೊರಡಿಸಿದೆ. ಇದನ್ನು ಬಿಟ್ಟು ಅತಿಥಿ ಉಪನ್ಯಾಸಕರಿಗೂ ಕಾಯಂ ಉಪನ್ಯಾಸಕರ ಮಾದರಿಯಲ್ಲಿ ಜವಾಬ್ದಾರಿ ವಹಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮೆ ಸೌಲಭ್ಯದ ಸರ್ಕಾರ ಭರವಸೆಯೂ ಈಡೇರಿಲ್ಲ. ಈಗಲಾದರೂ ಗೌರವಧನ ಹೆಚ್ಚಿಸಬೇಕು. ಐದು ಸಾವಿರ ಪ್ರಾಧ್ಯಾಪಕರ ಹುದ್ದೆ ಭರ್ತಿ ವೇಳೆ ವಿಶೇಷವಾಗಿ ಪರಿಗಣನೆ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದರು.
ಸಂದ ಗೌರವಾಧ್ಯಕ್ಷ ಸದಾಶಿವ ಆರಾಧ್ಯ ವಾತನಾಡಿ, ಉತ್ತಮ ಕಾರ್ಯ ನಿರ್ವಹಣೆಯ ನಡುವೆಯೂ ಅತಿಥಿ ಉಪನ್ಯಾಸಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರಿಸಿದರು.
ಸಂಘದ ಪದಾಧಿಕಾರಿಗಳಾದ ಫಯಾಜ್, ರಾಜಶೇಖರ್, ವೆಂಕಟರಮಣ ಇದ್ದರು.