ಹೆಬ್ಬಾವನ್ನು ನುಂಗಿದ ನಾಗರಹಾವು!; ದೃಶ್ಯ ಕಂಡು ನಿಬ್ಬೆರಗಾದ ಸ್ಥಳೀಯರು

Untitled design - 2023-07-24T175900.372
Published on

ಮೈಸೂರು: ನಾಗರಹಾವು ಹೆಬ್ಬಾವನ್ನು ನುಂಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಅಶ್ವರ್ಯಚಕಿತರಾಗಿದ್ದಾರೆ.

ಮೈಸೂರಿನಲ್ಲಿ ಇದೇ ರೀತಿಯ ಮೂರು ಘಟನೆಗಳು ನಡೆದಿದ್ದು, ನಾಗರಹಾವು ಚಪ್ಪಲಿಯನ್ನು ನುಂಗುವುದು, ಬಟ್ಟೆಯನ್ನು ನುಂಗುವುದು ಮತ್ತು ಇದೀಗ ಹೆಬ್ಬಾವನ್ನು ನುಂಗಿರುವ ಘಟನೆಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ. ಕಳೆದ ಭಾನುವಾರ ನಾಗರಹಾವು ಹೆಬ್ಬಾವನ್ನು ನುಂಗುತ್ತಿರುವ ಅಪರೂಪದ ದೃಶ್ಯ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಹಾವನ್ನು ಮತ್ತೊಂದು ಹಾವು ನುಂಗುವುದನ್ನು ಕಂಡ ಸ್ಥಳೀಯರು ನಿಬ್ಬೆರಗಾಗಿದ್ದಾರೆ.

ಈ ಘಟನೆ ಮೈಸೂರಿನ ಜೆಪಿ ನಗರದಲ್ಲಿ ಸಂಭವಿಸಿದೆ. ಹೆಬ್ಬಾವನ್ನು ನಾಗರಹಾವು ನುಂಗುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net