ಮಾನಸಿಕ ಆರೋಗ್ಯ ಕೇಂದ್ರದಿಂದ ಹಿಂದಿರುಗಿ ಅಜ್ಜ-ಅಜ್ಜಿಯನ್ನು ಹತ್ಯೆಗೈದ ಯುವಕ!

Untitled design - 2023-07-24T170921.297
Published on

ಕೇರಳ: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕೇಂದ್ರದಿಂದ ಹಿಂದಿರುಗಿದ್ದ ವ್ಯಕ್ತಿ, ಒಂದು ದಿನದ ಬಳಿಕ ತನ್ನ ಅಜ್ಜ-ಅಜ್ಜಿಯನ್ನು ಹತ್ಯೆಗೈದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಆರೋಪಿಯನ್ನು ಅಕ್ಮಲ್ ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಬಳಿಕ ಸ್ಥಳದಿಂದ ಆತ ಪರಾರಿಯಾಗಿದ್ದ. ಇದೀಗ ಆತನನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಭಾನುವಾರ ತಿರೂರಿನ ಮಾನಸಿಕ ಆರೋಗ್ಯ ಕೇಂದ್ರದಿಂದ ಮನೆಗೆ ಹಿಂದಿರುಗಿದ್ದ ಆರೋಪಿ, ತನ್ನ ಅಜ್ಜ ಅಬ್ದುಲ್ಲಾ (75) ಮತ್ತು ಅಜ್ಜಿ ಜಮೀಲಾ (64) ಅವರೊಂದಿಗೆ ವಾಸಿಸುತ್ತಿದ್ದನು.

ಸೋಮವಾರ ಬೆಳಗ್ಗೆ ಸಂಬಂಧಿಕರೊಬ್ಬರು ದಿನಸಿ ಸಾಮಾಗ್ರಿಗಳನ್ನು ನೀಡಲು ವೃದ್ಧ ದಂಪತಿಗಳಿದ್ದ ಮನೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಮಾಹಿತಿ ಪಡೆದ ಗುರುವಾಯೂರು ಸಹಾಯಕ ಪೊಲೀಸ್ ಕಮಿಷನರ್ (ACP) ಕೆ.ಜಿ.ಸುರೇಶ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದೆ.

ಕೊಲೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು. ಸದ್ಯ ಇದೀಗ ಆತನನ್ನು ಬಂಧಿಸಲಾಗಿದ್ದು, ಪ್ರಸ್ತುತ ಆತನನ್ನು ಕರ್ನಾಟಕದ ಮಂಗಳೂರು ಪೊಲೀಸ್ ಠಾಣೆಯ ಕಸ್ಟಡಿಯಲ್ಲಿ ಇರಿಸಲಾಗಿದೆ. ಮಂಗಳೂರಿನತ್ತ ತೆರಳಿರುವ ಕೇರಳದ ಪೊಲೀಸರ ತಂಡ, ಹೆಚ್ಚಿನ ತನಿಖೆಗಾಗಿ ರಾಜ್ಯಕ್ಕೆ ಕರೆತರಲು ಮುಂದಾಗಿದೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net