More

  ಹೃದಯಾಘಾತಕ್ಕೆ ಖ್ಯಾತ ಯುವ ಕ್ರಿಕೆಟಿಗ ಬಲಿ

  ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವಕರನ್ನು ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಬಾಧಿಸುತ್ತಿದ್ದು, ಇದೀಗ ಇದಕ್ಕೆ ಸಂಬಂಧಿಸಿದಂತೆ ಯುವ ಕ್ರಿಕೆಟಿಗನೋರ್ವ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಮೃತರನ್ನು ಜೋಶ್​ ಬೇಕರ್​ (20) ಎಂದು ಗುರುತಿಸಲಾಗಿದೆ.

  ಈ ಕುರಿತು ಪ್ರಕಟಣೆ ಹೊರಡಿಸಿರುವ ವೋರ್ಸೆಸ್ಟರ್‌ಶೈರ್ ಕ್ರಿಕೆಟ್​ ಕ್ಲಬ್​ ಜೋಶ್​ ಬೇಕರ್​ (20) ಅವರ ನಿಧನವು ಅತೀವ್ ದುಃಖವನ್ನುಂಟು ಮಾಡಿದ್ದು, ಅವರು ತಂಡ ಮಾತ್ರವಲ್ಲ ನಮ್ಮ ಕುಟುಂಬದ ಅವಿಭಾಜ್ಯ ಅಂಗವಾಗಿದ್ದರು ಎಂದು ಬರೆಯಲಾಗಿದೆ.

  ಇದನ್ನೂ ಓದಿ: ಆತ ಅದ್ಭುತ ಆಟಗಾರ ಆದರೆ…; ಕೆ.ಎಲ್. ರಾಹುಲ್​ರನ್ನು ಆಯ್ಕೆ ಮಾಡದಿರುವ ಕುರಿತು ಅಜಿತ್​ ಅಗರ್ಕರ್​ ನೀಡಿದ ಸ್ಪಷ್ಟನೆ ಹೀಗಿದೆ

  ಈ ಕುರಿತು ಪ್ರತಿಕ್ರಿಯಿಸಿದ ಅಲ್ಲಿನ ಅಧಿಕಾರಿಯೊಬ್ಬರು, ಸೋಮರ್ಸೆಟ್​ ವಿರುದ್ಧದ ಪಂದ್ಯದಲ್ಲಿ ಮೊದಲೆರಡು ದಿನ ಉತ್ತಮವಾಗಿ ಆಡಿದ್ದ ಜೋಶ್​ 3 ವಿಕೆಟ್​ಗಳನ್ನು ಪಡೆದಿದ್ದರು. ಮೂರನೇ ದಿನದಾಟ ಶುರುವಾದರೂ ಅವರು ತಂಡವನ್ನು ಕೂಡಿಕೊಂಡಿರಲಿಲ್ಲ. ಫೋನ್‌ ಕರೆ ತೆಗೆಯದೇ ಇದ್ದ ಕಾರಣ ಅನುಮಾನಗೊಂಡು ಆತ ವಾಸಿಸುತ್ತಿದ್ದ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

  2021ರಲ್ಲಿ ಪ್ರಥಮದರ್ಜೆ ಕ್ರಿಕೆಟ್‌ ಮತ್ತು ಲಿಸ್ಟ್ ‘ಎ’ ಕ್ರಿಕೆಟ್‌ಗೆ ಬೊರ್ಸ್ಟರ್‌ಶೈರ್‌ ತಂಡದ ಮೂಲಕ ಪದಾರ್ಪಣೆ ಮಾಡಿದ ಜಾಶ್‌ ಬೇಕರ್‌, ಇಂಗ್ಲೆಂಡ್‌ನ 19 ವರ್ಷದೊಳಗಿನ ಕ್ರಿಕೆಟ್‌ ತಂಡವನ್ನೂ ಪ್ರತಿನಿಧಿಸಿದ್ದಾರೆ. ಬೇಕರ್‌ ಸಾವಿನ ಸುದ್ದಿ ಹೊರ ಬೀಳುತ್ತಿದ್ದಂತೆಯೇ ವೊರ್ಸ್ಟರ್‌ಶೈರ್‌ ಮತ್ತು ಸೋಮರ್ಸೆಟ್ ನಡುವಣ ಪಂದ್ಯವನ್ನು ರದ್ದುಪಡಿಸಿ ಫಲಿತಾಂಶ ಡ್ರಾ ಎಂದು ಘೋಷಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts