More

    ಎಕ್ಸ್​ಪೋ ವೀಕ್ಷಣೆಗೆ ಜನಸಾಗರ

    ಹೊಸೂರಿನ ರಾಯ್ಕರ್​ ಮೈದಾನದಲ್ಲಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಆಯೋಜಿಸಿರುವ ಪ್ರಾಪಟಿರ್ ಎಕ್ಸ್​ಪೋಕ್ಕೆ ಎರಡನೇ ದಿನವಾದ ಶನಿವಾರವೂ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
    ಸಂರ್ಪೂಣ ಹವಾ ನಿಯಂತ್ರಿತ ಟೆಂಟ್​ ಅಡಿ ಬಿಲ್ಡರ್ಸ್​, ಡೆವಲಪರ್ಸ್​, ಬ್ಯಾಂಕರ್ಸ್​ ಸೇರಿ 40ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿದ್ದು, ಎಲ್ಲ ಮಳಿಗೆಗಳು ಜನರ ಗಮನ ಸೆಳೆಯುತ್ತಿವೆ. ಬಿಸಿಲನ್ನೂ ಲೆಕ್ಕಿಸದೇ ಬೆಳಗ್ಗೆಯಿಂದಲೇ ಎಕ್ಸ್​ಪೋಕ್ಕೆ ಆಗಮಿಸುತ್ತಿರುವ ಸಾವಿರಾರು ಜನರು ನಿವೇಶನ, ವಸತಿ ಯೋಜನೆಗಳು, ಸಾಲ ಸೌಲಭ್ಯ ಸೇರಿ ಮನೆ ನಿರ್ಮಾಣಕ್ಕೆ ಬೇಕಾದ ಸಮಗ್ರ ಮಾಹಿತಿಗಳನ್ನು ಪಡೆದಿದ್ದಾರೆ.
    *ಏನೆಲ್ಲ ಇದೆ? : ಪ್ರಾಪಟಿರ್ ಎಕ್ಸ್​ ಪೋದಲ್ಲಿ ವಿವಿಧ ಬಗೆಯ ನಿವೇಶನ, ಸಕಲ ಸೌಲಭ್ಯ ಹೊಂದಿರುವ ಅಪಾರ್ಟ್​ಮೆಂಟ್ಸ್​, ರಜೆ ದಿನಗಳಲ್ಲಿ ನಿಸರ್ಗದ ಮಡಿಲಲ್ಲಿ ಕಾಲ ಕಳೆಯಲು ಅನುಕೂಲಕರವಾಗಿರುವ ಾಮ್​ರ್ ಲ್ಯಾಂಡ್​ ಸೇರಿ ಅನೇಕ ರೀತಿಯ ವಸತಿ ಯೋಜನೆಗಳ ಪ್ರೊಜೆಕ್ಟ್​ಗಳ ಭರಪೂರ ಮಾಹಿತಿ ಇದೆ.
    ಹು&ಧಾ ಅವಳಿನಗರದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಎಂಬುದನ್ನು ಜನರು ಅರಿತಿದ್ದಾರೆ. ಹೀಗಾಗಿ ಧಾರವಾಡ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಾದ ಗದಗ, ಹಾವೇರಿ, ಬೆಳಗಾವಿ ಸೇರಿ ಇತರ ಜಿಲ್ಲೆಗಳಿಂದಲೂ ಜನರು ಆಗಮಿಸಿ ಸಮಗ್ರ ಮಾಹಿತಿ ಪಡೆಯುತ್ತಿದ್ದಾರೆ.
    ನಿವೇಶನ ಖರೀದಿ ಸಮಯದಲ್ಲಿ ಎಷ್ಟೇ ಮುಂಜಾಗ್ರತೆ ವಹಿಸಿದರೂ ಕಡಿಮೆ. ಆದರೆ ಹು&ಧಾ ನಗರಾಭಿವೃದ್ಧಿ ಪ್ರಾಧಿಕಾರವೂ ಎಕ್ಸ್​ಪೋದಲ್ಲಿ ಭಾಗವಹಿಸಿದ್ದರಿಂದ ಗ್ರಾಹಕರು ಖರೀದಿ ಮಾಡುವ ನಿವೇಶನದ ಸಂರ್ಪೂಣ ಮಾಹಿತಿ ಒದಗಿಸಲಿದ್ದಾರೆ. ಇದರಿಂದ ಗ್ರಾಹಕರು ನಿಶ್ಚಿಂತೆಯಿಂದ ತಮ್ಮಿಷ್ಟದ ನಿವೇಶನಗಳನ್ನು ಬುಕ್​ ಮಾಡುವ ಮೂಲಕ ತಮ್ಮ ಸ್ವಂತ ಸೂರಿನ ಕನಸು ನನಸಾಗಿಸಿಕೊಂಡಿದ್ದಾರೆ.
    *ವೀಕ್ಷಣೆಗೂ ಸೌಲಭ್ಯ: ಎಕ್ಸ್​ಪೋದಲ್ಲಿ ಮಳಿಗೆ ಸ್ಥಾಪಿಸಿರುವ ಬಿಲ್ಡರ್ಸ್​, ಡೆವಲಪರ್ಸ್​ಗಳು ತಮ್ಮ ಯೋಜನೆಗಳನ್ನು ಖುದ್ದು ವೀಕ್ಷಣೆ ಮಾಡಲು ಸಹ ವ್ಯವಸ್ಥೆ ಕಲ್ಪಿಸಿದ್ದಾರೆ. ನಿವೇಶನ, ವಸತಿ ಯೋಜನೆಗಳ ಮಾಹಿತಿ ಪಡೆಯುವ ಗ್ರಾಹಕರಲ್ಲಿ ಕೆಲವರು ಸ್ಥಳ ವೀಕ್ಷಣೆಗೆ ಸಹ ಅವಕಾಶ ಕೋಡುತ್ತಿದ್ದಾರೆ. ಹೀಗಾಗಿ ಬಹುತೇಕ ಬಿಲ್ಡರ್ಸ್​, ಡೆವಲಪರ್ಸ್​ಗಳು ತಾವು ಸಿದ್ಧಪಡಿಸುತ್ತಿರುವ ನಿವೇಶನ, ವಸತಿ ಯೋಜನೆಗಳ ಸ್ಥಳಗಳಿಗೆ ಗ್ರಾಹಕರಿಗೆ ಕರೆದೊಯ್ದು ಸಿದ್ಧವಾಗಿರುವ ನಿವೇಶನ, ಅಲ್ಲಿ ನೀಡುತ್ತಿರುವ ಸೌಲಭ್ಯಗಳ ಕುರಿತು ಸಂರ್ಪೂಣ ಮಾಹಿತಿ ನೀಡುತ್ತಿದ್ದಾರೆ. ಇದು ಗ್ರಾಹಕರಿಗೆ ಸಹ ಖುಷಿ ತರುವುದರ ಜತೆಗೆ ತಾವು ಖರೀದಿಸಲು ಯೋಚಿಸಿರುವ ನಿವೇಶನದ ಸದ್ಯದ ಸ್ಥಿತಿ ಸಹ ತಿಳಿಯಲು ಸಹಕಾರಿಯಾದಂತಾಗಿದೆ.


    ಇಂದೇ ಕೊನೇ ದಿನ
    ಹು-ಧಾ ಅವಳಿನಗರದಲ್ಲಿ ಸೂಕ್ತ ಸ್ಥಳದಲ್ಲಿ ನಿವೇಶನ ಖರೀದಿ ಮಾಡುವ ಬಯಕೆ ಹೊಂದಿರುವ ಜನರು ತಮ್ಮ ಆಸಕ್ತಿಕರ ಸ್ಥಳಗಳಲ್ಲಿ ಅತ್ಯಂತ ಸೂಕ್ತ ದರದಲ್ಲಿ ನಿವೇಶನ, ಮನೆಗಳನ್ನು ಖರೀದಿ ಮಾಡಲು ಇದೊಂದು ಸುವರ್ಣ ಅವಕಾಶ. ಎಕ್ಸ್​ ಪೋದಲ್ಲಿ ಬುಕ್ಕಿಂಗ್​ ಮಾಡುವ ಗ್ರಾಹಕರಿಗೆ ಬಿಲ್ಡರ್ಸ್​, ಡವಲಪರ್ಸ್​ ಅತ್ಯಾಕರ್ಷಕ ಕೊಡುಗೆ, ರಿಯಾಯಿತಿ ದರಗಳನ್ನು ಘೋಷಣೆ ಮಾಡಿದ್ದಾರೆ. ಈ ಕೊಡುಗೆಗಳನ್ನು ಭಾನುವಾರವೇ ಕೊನೇ ದಿನವಾಗಿದೆ. ಹೀಗಾಗಿ ಜನರು ಇದರ ಪ್ರಯೋಜನ ಪಡೆಯಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts