More

    ‘ದ ಕೇರಳ ಸ್ಟೋರಿ’ ಹಿಟ್​ ಆದ ಬೆನ್ನಲ್ಲೇ ಹೊಸ ಪ್ರಾಜೆಕ್ಟ್​ನಲ್ಲಿ ನಟಿ ಅದಾ ಶರ್ಮಾ; ಈ ಚಿತ್ರ ಒಟಿಟಿಗೆ ಮಾತ್ರ?

    ಮುಂಬೈ: ‘ದ ಕೇರಳ ಸ್ಟೋರಿ’ ಚಿತ್ರದ ಯಶಸ್ಸಿನ ನಂತರ ನಟಿ ಅದಾ ಶರ್ಮಾ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಆದ್ರೆ, ಇದೀಗ ಹೊಸ ಅಪ್ಡೇಟ್​​ ಸಿಕ್ಕಿದ್ದು, ಒಟಿಟಿ ಪ್ಲಾಟ್​ಫಾರ್ಮ್​​ನಲ್ಲಿ ಮೂಡಿಬರಲಿರುವ ‘ಕಮಾಂಡೋ’ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿಪ್ರೇಕ್ಷಕರನ್ನು ಮತ್ತೊಮ್ಮೆ ಮನರಂಜಿಸಲು ಮುಂದಾಗಿದ್ದಾರೆ. ಸದ್ಯ ಈ ಸುದ್ದಿ ಅವರ ಅಭಿಮಾನಿಗಳಿಗೆ ಭಾರೀ ಸಂತಸ ನೀಡಿದೆ.

    ಇದನ್ನೂ ಓದಿ: ಸದಸ್ಯರ ಶ್ರೇಯೋಭಿವೃದ್ಧಿಯೇ ಸಂಸ್ಥೆಯ ಗುರಿ: ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆಯ ಅಧ್ಯಕ್ಷ ಬಿ.ಲೋಕೇಶ್ ಹೇಳಿಕೆ

    ಕಮಾಂಡೋ ಚಿತ್ರದ ಸರಣಿಗಳಾದ ಕಮಾಂಡೋ 2 ಮತ್ತು 3 ರಲ್ಲಿ ನಟಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಒಟಿಟಿ ಪ್ಲಾಟ್‌ಫಾರ್ಮ್​​ನಲ್ಲಿ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸುವ ಮುಖೇನ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ  ಬಹಿರಂಗಪಡಿಸಿದೆ. ದ ಕೇರಳ ಸ್ಟೋರಿ ಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಅವರೆ ಕಮಾಂಡೋ ಸಿನಿಮಾದ ನಿರ್ಮಾಣವನ್ನು ಮಾಡಿದ್ದಾರೆ.

    ಆದಿತ್ಯ ದತ್​​ ನಿರ್ದೇಶಿಸಿರುವ ಚಿತ್ರವನ್ನು ಸನ್‌ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್​ನಡಿ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ವೈಭವ್ ತತ್ವವಾದಿ, ಇಷ್ಟಿಯಕ್ ಖಾನ್, ಶ್ರೇಯಾ ಚೌಧರಿ, ಅಮಿತ್ ಸಿಯಾಲ್ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ್ದಾರೆ. ರಿಲೀಸ್​ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಚಿತ್ರತಂಡ ಪ್ರಕಟಿಸಲಿದೆ,(ಏಜೆನ್ಸೀಸ್).

    ಕ್ಯಾಪ್ ಧರಿಸುವುದರಿಂದ ಕೂದಲು ಉದುರುವುದು ನಿಜವೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts