More

    ಸದಸ್ಯರ ಶ್ರೇಯೋಭಿವೃದ್ಧಿಯೇ ಸಂಸ್ಥೆಯ ಗುರಿ: ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆಯ ಅಧ್ಯಕ್ಷ ಬಿ.ಲೋಕೇಶ್ ಹೇಳಿಕೆ

    ಮಂಡ್ಯ: ನಮ್ಮ ಸದಸ್ಯರ ಶ್ರೇಯೋಭಿವೃದ್ಧಿಯೇ ಪ್ರಮುಖ. ಅದಕ್ಕೆ ತಕ್ಕಂತೆ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆಯ ಅಧ್ಯಕ್ಷ ಬಿ.ಲೋಕೇಶ್ ಹೇಳಿದರು.
    ತಾಲೂಕಿನ ಹೊಸಬೂದನೂರಿನ ಹೋಟೆಲ್ ಲೆಮನ್ ಗ್ರಾಸ್‌ನಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸಭೆ, ವೆಬ್‌ಸೈಟ್ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಹೇಳಿಗೆಯೇ ನನ್ನ ಆದ್ಯ ಕರ್ತವ್ಯ. ಎಲ್ಲ ಸದಸ್ಯರನ್ನು ಒಂದೇ ರೀತಿ ಎಂದು ಭಾವಿಸಿ ಅವರಲ್ಲಿ ಒಬ್ಬರಿಗೂ ತೊಂದರೆ ಆಗದಂತೆ ಹಾಗೂ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುವುದು. ರಾಜ್ಯ ಹಾಗೂ ರಾಷ್ಟ್ರೀಯ ಸಂಸ್ಥೆಯ ಬೆಂಬಲದೊಂದಿಗೆ ನಮ್ಮ ಸಂಸ್ಥೆಯನ್ನು ಮತ್ತಷ್ಟು ಬಲಗೊಳಿಸುತ್ತೇನೆ ಎಂದು ತಿಳಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ರಾಜ್ಯಾಧ್ಯಕ್ಷ ಆರ್.ರಘುರೆಡ್ಡಿ, ಜಿಲ್ಲಾಮಟ್ಟದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಸಂಸ್ಥೆಯ ಮೂಲಕ ನಮ್ಮ ಗಮನಕ್ಕೆ ತಂದರೆ ಬಗೆಹರಿಸಲಾಗುವುದು ಎಂದರು.
    ವೆಬ್‌ಸೈಟ್ ಹಾಗೂ ಸ್ಮರಣ ಸಂಚಿಕೆಯನ್ನು ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಕೆ.ಜೀವನ್ ಬಿಡುಗಡೆ ಮಾಡಿದರು. ಕಾರ್ಯದರ್ಶಿ ಕೆ.ಎಲ್.ರಾಜಶೇಖರ್ ವಾರ್ಷಿಕ ವರದಿ ಮಂಡಿಸಿದರು. ರಾಜ್ಯ ಉಪಾಧ್ಯಕ್ಷರಾದ ಬಿ.ಕೆ.ಪ್ರಸನ್ನಕುಮಾರ್, ಶಿವರಾಜ್‌ಪಾಟೀಲ್, ಜಂಟಿ ಕಾರ್ಯದರ್ಶಿ ಜಿ.ಎನ್.ಭಾನುಪ್ರಕಾಶ್, ಸಂಘಟನಾ ಕಾರ್ಯದರ್ಶಿ ಬಂಡು ಆರ್.ಕತ್ತಿಸ, ಖಜಾಂಚಿ ಬಿ.ಉಮೇಶ್, ಪೋಪಾಟ್‌ಲಾಲ್, ಎಂ.ನಂದೀಶ್, ಕೆ.ಪ್ರಭಾಕರನ್, ಧನ್ವಂತರಿ ಕೃಷ್ಣಪ್ಪ, ವೈಷ್ಣವಿ ಮಂಜುನಾಥ್, ಮಹೇಶ, ಸುರೇಶ್, ನಂಜೇಗೌಡ, ಭೀಮಣ್ಣ, ಗಿರೀಶ್, ಸತೀಶ್, ಶಾಂತಿಬಾಬು ಇತರರಿದ್ದರು.
    ಇದೇ ವೇಳೆ 25 ವರ್ಷ ನಿರಂತರ ಸೇವೆ ಸಲ್ಲಿಸಿದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ ಇತ್ತೀಚೆಗೆ ಅಕಾಲಿಕ ಮರಣಕ್ಕೆ ತುತ್ತಾದ ಸಂಸ್ಥೆಯ ಸದಸ್ಯರೂ ಆದ ಮಳವಳ್ಳಿಯ ಖ್ಯಾತ ವೈದ್ಯ ಡಾ.ಶ್ರೀಧರ್ ಅವರ ಆತ್ಮಕ್ಕೆ ಶಾಂತಿಕೋರುವುದರ ಜತೆಗೆ ಅವರ ಕುಟುಂಬಕ್ಕೆ 25 ಸಾವಿರ ರೂ ಚೆಕ್ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts