ಮೈಶುಗರ್ಸ್ ಖಾಸಗೀಕರಣ ಮಾಡದಿರಲು ಸಿಎಂ ನಿರ್ಧಾರ

Mysugar
Published on

ಬೆಂಗಳೂರು: ಮಂಡ್ಯದ ಮೈಶುಗರ್ಸ್ ಕಾರ್ಖಾನೆಯನ್ನು ಸರ್ಕಾರದ ಅಧೀನದಲ್ಲಿಯೇ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿಎಸ್​ವೈ ನಿರ್ಧಾರ ಮಾಡಿದ್ದಾರೆ.

ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿರುವ ಅವರು, ಮಂಡ್ಯ ಜಿಲ್ಲೆಯ ಜನರಿಗೆ ಮೈಶುಗರ್ಸ್ ಕಾರ್ಖಾನೆಯ ಜತೆ ಭಾವನಾತ್ಮಕ ಸಂಬಂಧವಿದೆ. ತಮ್ಮ ತವರು ಜಿಲ್ಲೆಯ ಜನರ ಭಾವನೆಗೆ ವಿರೋಧವಾಗಿ ಕಾರ್ಖಾನೆಯನ್ನು ಖಾಸಗಿಗೆ ನೀಡುವುದು ಬೇಡವೆಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ನಾನು ಮುಖ್ಯಮಂತ್ರಿ ಆಗಿರುವಾಗ ಮಂಡ್ಯ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಸಾಲ ತಂದಾದರೂ ಕಾರ್ಖಾನೆ ಉಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net