ರಾಜ್ಯಕ್ಕಿಲ್ಲ ಆಂಫನ್ ಸೈಕ್ಲೋನ್ ಪರಿಣಾಮ

Amphon Cyclone 16 may 20
Published on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಆಂಫನ್ ಚಂಡಮಾರುತದಿಂದ ರಾಜ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಕೆಲ ಜಿಲ್ಲೆಗಳಲ್ಲಿ ಮೂರು ದಿನ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ಚೆನ್ನೈನ 400 ಕಿ.ಮೀ ಆಚೆಗೆ ಆಂಫನ್ ಚಂಡಮಾರುತಗಳು ಹಾದು ಹೋಗುತ್ತಿವೆ. ಪಶ್ಚಿಮ ಬಂಗಾಳ, ಓರಿಸ್ಸಾ ಹಾಗೂ ಬಾಂಗ್ಲಾದೇಶ ಕಡೆ ಮಾರುತಗಳು ಸಾಗುತ್ತಿದ್ದು, ಆ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದರು.

ಜೂ.9ಕ್ಕೆ ಮುಂಗಾರು ಪ್ರವೇಶ: ಈ ಬಾರಿ ಮುಂಗಾರು ರಾಜ್ಯಕ್ಕೆ ತಡವಾಗಿ ಆಗಮಿಸಲಿದೆ. ಮೂರು ದಿನದ ಹಿಂದೆಯಷ್ಟೇ ಸಾಮಾನ್ಯವಾಗಿ ಈ ಬಾರಿ ಮುಂಗಾರು ಜೂ.1ರಂದು ಕೇರಳಕ್ಕೆ ಹಾಗೂ ಜೂನ್.5ರಂದು ರಾಜ್ಯಕ್ಕೆ ಪ್ರವೇಶಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿತ್ತು. ಆದರೆ, ಬಂಗಾಳಕೊಲ್ಲಿಯಲ್ಲಿ ದಿಢೀರ್ ಉಂಟಾಗಿರುವ ಚಂಡಮಾರುತ ಪರಿಣಾಮ ಕೇರಳಕ್ಕೆ ಜೂ.5ರಂದು ಹಾಗೂ ಕರ್ನಾಟಕಕ್ಕೆ ಜೂ.9ರಂದು ಮುಂಗಾರು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net