ಗ್ಯಾಂಗ್​ರೇಪ್​ ಆರೋಪಿಗಳಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ....: ಸಂತ್ರಸ್ತೆಯ ಕುಟುಂಬಕ್ಕೆ ಸಿಎಂ ಭರವಸೆ

Yogi Adityanath 30 Sept
Published on

ಲಖನೌ: ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ನಡೆದಿರುವ ಗ್ಯಾಂಗ್​ ರೇಪ್​ ಪ್ರಕರಣದ ತನಿಖೆಯನ್ನು ಎಸ್​​ಐಟಿ (ವಿಶೇಷ ತನಿಖಾ ದಳ)ಗೆ ವಹಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಇದೀಗ ಮೃತ ಸಂತ್ರಸ್ತೆಯ ಕುಟುಂಬದೊಂದಿಗೆ ಇಂದು ವಿಡಿಯೋ ಕಾಲ್​ ಮೂಲಕ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆಯನ್ನೂ ನೀಡಿದ್ದಾರೆ.

ಅತ್ಯಾಚಾರ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೇ ಮೃತಳ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನೂ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.  ಇದನ್ನೂ ಓದಿ: ‘ಮೊದಲು ಮಾದಕದ್ರವ್ಯ ವ್ಯಸನಿಯಾದೆ, ಬಳಿಕ ಡ್ರಗ್ಸ್ ಪೆಡ್ಲರ್ ಆಗಿಬಿಟ್ಟೆ…’

ಮೃತಳ ಕುಟುಂಬಕ್ಕೆ 25 ಲಕ್ಷ ರೂ.ಆರ್ಥಿಕ ನೆರವು. ಶಾಲಾ ಶಿಕ್ಷಕರ ಮಟ್ಟದ ಸರ್ಕಾರಿ ಉದ್ಯೋಗ, ಸರ್ಕಾರಿ ಯೋಜನೆಯಡಿ ವಸತಿ ಮತ್ತು ಪ್ರಕರಣದ ವಿಚಾರಣೆಯನ್ನು ಫಾಸ್ಟ್​ ಟ್ರ್ಯಾಕ್​ ಕೋರ್ಟ್​​ನಲ್ಲಿ ನಡೆಸುವ ಭರವಸೆಯನ್ನು ಯೋಗಿ ಆದಿತ್ಯನಾಥ್​ ಸಂತ್ರಸ್ತೆಯ ತಂದೆಗೆ ನೀಡಿದ್ದಾಗಿ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ‘ದೇಗುಲಗಳನ್ನು ಧ್ವಂಸ ಮಾಡಿ ಕಟ್ಟಿರುವ ಮಸೀದಿಗಳನ್ನು ಒಡೆಯಿರಿ’- ಪ್ರಧಾನಿಗೆ ಮುಸ್ಲಿಂ ಮುಖಂಡನ ಪತ್ರ

ಇನ್ನು ಹತ್ರಾಸ್ ಗ್ಯಾಂಗ್​ ರೇಪ್​ನಿಂದ ರೊಚ್ಚಿಗೆದ್ದಿರುವ ವಾಲ್ಮೀಕಿ ಸಮುದಾಯದ ಜನರು ರಸ್ತೆಗಳನ್ನು ಬ್ಲಾಕ್​ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.(ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net