ಸಿ.ಟಿ. ರವಿ ಏಕೆ ಆ ಪದ ಬಳಸಿದ್ದಾರೋ ಗೊತ್ತಿಲ್ಲ, ಇದೊಂದು ಅಪರಾಧ: ಸಿಎಂ ಸಿದ್ದರಾಮಯ್ಯ | Mandya

ವಿಜಯವಾಣಿ - 2024-12-20T113806.056
Published on

Mandya: ಇಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೆಜ್ಜಲಗೆರೆ ಹೆಲಿಪ್ಯಾಡ್ ಬಳಿ ಮಾಧ್ಯಮದವರಿಗೆ ಸಿ.ಟಿ. ರವಿ ಅವಾಚ್ಯ ಪದ ಬಳಕೆ ಮತ್ತು ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದರು.

"ಒಬ್ಬ ಹೆಣ್ಣುಮಗಳಿಗೆ ಬಹಳ ಅಸಭ್ಯವಾಗಿ, ಅವಹೇಳನಕಾರಿಯಾಗಿ ಮಾತನಾಡಿದರೂ ಕೂಡ ಸಪೋರ್ಟ್ ಮಾಡ್ತಾರಾ ಬಿಜೆಪಿಯವರು? ಅವ್ರು ಹೇಳಿದ್ದು ಸುಳ್ಳು. ನಾನು ತಪ್ಪು ಮಾಡಿದ್ದೀನಿ, ಅವಾಚ್ಯ ಶಬ್ಧಗಳಿಂದ ಮಾತಾಡಿದ್ದೀನಿ ಅಂತಾ ಸಿಟಿ ರವಿ ಒಪ್ಪಿಕೊಳ್ತಾರಾ, ಮತ್ಯಾಕೆ ಆತ ಅರೆಸ್ಟ್ ಆಗಿದ್ದಾರೆ? ಸಿ.ಟಿ. ರವಿ ಏಕೆ ಆ ಪದ ಬಳಸಿದ್ದಾರೋ ನನಗೆ ಗೊತ್ತಿಲ್ಲ.ಇದೊಂದು ಅಪರಾಧ. ನಾನು ಕೆಟ್ಟ ಪದ ಬಳಸಿದೆ ಅಂತ ಸಿಟಿ ರವಿ ಹೇಳಿದ್ದಾನೆ. ಅದರ ನಂತರ ವಿಚಾರ ಏನಾಯಿತು ನನಗೆ ಗೊತ್ತಿಲ್ಲ" ಎಂದರು.

ನನಗೆ ಜೀವ ಭಯ ಇದೆ ಎಂಬ ಸಿಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಎಲ್ಲಾ ಅಪರಾಧಿಗಳು ಜೀವ ಭಯ ಇದೆ ಅಂತಾ ಹೇಳ್ತಾರೆ. ಹಾಗೆ ಹೇಳಿದರು ಎಂದು ತನಿಖೆ ಮಾಡದೆ ಸುಮ್ಮನಿರಬೇಕೇ? ಸಿ.ಟಿ. ರವಿ ಹಿತದೃಷ್ಟಿಯಿಂದಲೇ ಪೊಲೀಸರು ಮೂರಾರು ಜಿಲ್ಲೆ ಓಡಾಡಿಸಿದ್ದಾರೆ. ಜನ ಗಲಾಟೆ ಮಾಡುತ್ತಾರೆ ಅಂತಾ ಸುತ್ತಾಡಿಸಿದ್ದಾರೆ" ಎಂದು ಸಿಎಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net