ನನ್ನ ವಿರುದ್ಧ ಬರೆದರೂ ಪೋನ್ ಮಾಡಿ ಕೇಳುವುದಿಲ್ಲ, ಯಾಕಂದ್ರೆ ಫ್ರೀಡಂ ಆಫ್ ಸ್ಪೀಚ್ ಅತಿ ಮುಖ್ಯ: ಸಿಎಂ

Untitled design - 2023-07-24T135351.562
Published on

ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಸಮಾಜದ ನಾಲ್ಕನೆಯ ಅಂಗ ಪತ್ರಿಕೆ. ಹೀಗಾಗಿ ನನ್ನ ವಿರುದ್ಧ ಯಾರು ಬರೆದರೂ ನಾನು ಅವರನ್ನು ಪೋನ್ ಮಾಡಿ ಕೇಳುವುದಿಲ್ಲ. ಯಾಕಂದರೆ ಫ್ರೀಡಂ ಆಫ್ ಸ್ಪೀಚ್ ಅತಿ ಮುಖ್ಯ" ಎಂದು ಹೇಳಿದರು.

ಈ ಬಗ್ಗೆ ಮಾತು ಮುಂದುವರಿಸಿದ ಸಿಎಂ, "ಪತ್ರಿಕೆಗಳಲ್ಲಿ ಸತ್ಯ ಸಿಗುತ್ತದೆ ಎಂದು ಹಿಂದೆ ಜನ ನೋಡುತ್ತಿದ್ದರು. ಆದ್ರೆ, ಈಗ ಆ ಪರಿಸ್ಥಿತಿ ಇಲ್ಲ. ಆ ನಿಟ್ಟಿನಲ್ಲಿ ಎಲ್ಲರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಬಸ್ ಪಾಸ್ ಕೇಳಿದ್ದಾರೆ. ಅದನ್ನು ಪರಿಶೀಲನೆ ಮಾಡುತ್ತೀನಿ. ಸಂಬಂಧಪಟ್ಟವರ ಜತೆ ಮಾತುಕತೆ ಮಾಡಿ ತಿಳಿಸುತ್ತೇನೆ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net