ಪಕ್ಷ ಉಳಿಸುವ ಯತ್ನದಲ್ಲಿ ಸಿದ್ಧಾಂತ ಬಲಿ ಕೊಡುತ್ತಿರುವ ಜೆಡಿಎಸ್: ಸಿದ್ದರಾಮಯ್ಯ ಟೀಕೆ

Untitled design (64)
Published on

ಬೆಂಗಳೂರು: ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಜೆಡಿಎಸ್ ತನ್ನ ಸಿದ್ಧಾಂತವನ್ನು ಬಲಿ ಕೊಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು "ಸಿದ್ದಾಂತವಿಲ್ಲದ ಪಕ್ಷಗಳು ಒಂದೆಡೆ ಸೇರುತ್ತಿರುವುದರಿಂದ, ನಾವು ಎನ್ಡಿಎ ಕಡೆ ಹೋದರೆ ತಪ್ಪಲ್ಲ, ಪಕ್ಷ ಉಳಿಸಿಕೊಳ್ಳುವುದು ಮುಖ್ಯ" ಎಂದು ಹೇಳುತ್ತಿರುವ ಬಗ್ಗೆ ಉತ್ತರ ನೀಡಿರುವ ಸಿಎಂ, "ಜೆಡಿಎಸ್​​ಗೆ ಸಿದ್ಧಾಂತವೇ ಇಲ್ಲ. ಬಿಜೆಪಿಗೆ ಬೆಂಬಲ ಸೂಚಿಸಿದ ನಂತರ ಅವರ ಜಾತ್ಯಾತೀತತೆ ಏನಾಯಿತು? ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಿದ್ಧಾಂತವನ್ನು ಬಲಿ ಕೊಡುತ್ತಿದ್ದಾರೆ ಅಂತಲೇ ಅರ್ಥ" ಎಂದು ಹೇಳಿದರು.

ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿಯೂ 21 ಪಕ್ಷಗಳ ಮುಖಂಡರು ಬಂದರೂ ಪ್ರಯೋಜನವಾಗಲಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರನ್ನೆಲ್ಲಾ ಕರೆದಿದ್ದು ಕುಮಾರಸ್ವಾಮಿಯವರೇ, ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರು ಆ ಸಂಬಂಧವನ್ನು ಮುಂದುವರೆಸಲಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net