ಚರ್ಮ ಸುಕ್ಕುಗಟ್ಟಿದ ಹಾಗೆ ಕಾಣುತ್ತಿದೆಯಾ?; ಅದಕ್ಕೆ ಪರಿಹಾರ ಮನೆಯಲ್ಲೇ ಇದೆ!

Glowing Skin
Published on

ವಯಸ್ಸಾದರೆ ಚರ್ಮ ಸುಕ್ಕಾಗುವುದು ಮತ್ತು ಕಣ್ಣಿನ ಸುತ್ತ ಕಪ್ಪು ಮೂಡುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಮಧ್ಯ ವಯಸ್ಸಿನಲ್ಲಿಯೇ ಇಂತಹ ತೊಂದರೆಗಳು ಎದುರಾಗುತ್ತಿವೆ. ಇದಕ್ಕೆಲ್ಲಾ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಮನೆಯಲ್ಲೇ ಇದೆ ಪರಿಹಾರ ಎನ್ನುತ್ತಾರೆ ತಜ್ಱರು.

ಪರಿಹಾರ ವಾರಕ್ಕೊಮ್ಮೆ ಅಭ್ಯಂಗ ಅಂದರೆ, ಮೈಗೆಲ್ಲ ಎಳ್ಳೆಣ್ಣೆ ಹಚ್ಚಿ ಅರ್ಧಗಂಟೆ ಇಲ್ಲವೇ ಒಂದು ಗಂಟೆ ನಂತರ ಸ್ನಾನ ಮಾಡಿ. ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಚರ್ಮದಲ್ಲಿ ಹೊಳಪು ಮೂಡುತ್ತದೆ. ಪ್ರತಿದಿನ ಊಟದ ನಂತರ ಹಣ್ಣುಗಳನ್ನು ತಿನ್ನಿ. ದಿನಕ್ಕೆ 3 ಲೀಟರ್ ನೀರು ಕುಡಿಯಿರಿ.

ಕಪ್ಪು ವರ್ತುಲ ಕಣ್ಣಿನ ಸುತ್ತಲಿನ ಕಪ್ಪು ಕಲೆಗೆ ಶ್ರೀಗಂಧ ಮತ್ತು ಕಸ್ತೂರಿ ಅರಿಶಿಣವನ್ನು ಹಾಲಿನಲ್ಲಿ ತೇಯ್ದು ಲೇಪಿಸಿಕೊಳ್ಳಿ. ಅರ್ಧ ಗಂಟೆ ಬಿಟ್ಟು ತೊಳೆದುಕೊಳ್ಳಿ. ಕಣ್ತುಂಬ ನಿದ್ರೆ ಮಾಡಿ. ಚಿಂತಿಸದಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net