

ಬೆಂಗಳೂರು: ಇಂದು (ಫೆ.26) 2024-25ನೇ ಸಾಲಿನ ರಾಜ್ಯ ಬಜೆಟ್ ಅನ್ನು ಬೆಳಗ್ಗೆ 10:15ಕ್ಕೆ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ, ತಮ್ಮ 15ನೇ ಆಯವ್ಯಯವನ್ನು ಮಂಡಿಸುವ ಮುಖೇನ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಇಲ್ಲಿಯವರೆಗೆ 14 ಬಾರಿ ಬಜೆಟ್ ಮಂಡಿಸಿ, ತಮ್ಮದೇ ದಾಖಲೆ ನಿರ್ಮಿಸಿರುವ ಸಿಎಂ ಸಿದ್ದರಾಮಯ್ಯ, ಇಂದು ಮಂಡಿಸುತ್ತಿರುವ 15ನೇ ಬಜೆಟ್ ಇದಾಗಿದೆ ಎಂಬುದು ವಿಶೇಷ. ಲೋಕಸಭೆ ಚುನಾವಣೆ ಸಮೀಪಿಸುವ ಮುನ್ನ ಬಜೆಟ್ ಘೋಷಿಸಲು ಮುಂದಾಗಿರುವ ಮುಖ್ಯಮಂತ್ರಿಗಳು, ಈ ಬಾರಿ ಜನರಿಗೆ ಹೊರಯಾಗದಂತೆ, ಲಾಭದಾಯಕವಾಗುವಂತೆ ನಡೆಸಿಕೊಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ.
ಚುನಾವಣಾ ಸಮೀಪದಲ್ಲಿರುವ ಕಾರಣ ಜನರ ಮೇಲೆ ತೆರಿಗೆ ಭಾರ ಹೇರದ ಬಜೆಟ್ ಇದಾಗಿರಲಿದೆ ಎಂದು ಹೇಳಲಾಗಿದ್ದು, ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ನ ಮೊತ್ತ ಹೆಚ್ಚಿರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಬಜೆಟ್ನಲ್ಲಿ ಏನೇನು ಘೋಷಣೆಯಾಗಲಿದೆ? ಯಾವ ಕ್ಷೇತ್ರಗಳಿಗೆ ಏನು ಸಿಗಲಿದೆ? ಎಂಬ ನಿರೀಕ್ಷೆಗಳು ಸದ್ಯ ರಾಜ್ಯದ ಜನರಲ್ಲಿ ಬೆಟ್ಟದಷ್ಟಿದೆ.
ಬರ ಪರಿಹಾರ, ರೈತರನ್ನು ಮದುವೆಯಾಗುವ ಹೆಣ್ಣಿಗೆ 5 ಲಕ್ಷ ರೂ. ಘೋಷಣೆ, ಕೃಷಿ ಯಂತ್ರೋಪಕರಣ, ರಸಗೊಬ್ಬರದ ಸಬ್ಸಿಡಿ ಹೆಚ್ಚಳ,
ರೈತರಿಗೆ 5 ಲಕ್ಷ ಜೀವ-ಆರೋಗ್ಯ ವಿಮೆ, ಬೆಂಬಲ ಬೆಲೆ, ಹಾಲು ಉತ್ಪಾದಕರಿಗೆ 5-10 ರೂ. ಪ್ರೋತ್ಸಾಹ ಧನದ ನಿರೀಕ್ಷೆ ಹೀಗೆ
ಜನರ ಮುಂತಾದ ನಿರೀಕ್ಷೆಗಳಿಗೆ ಸಿಗುವ ಉತ್ತರವೇನು? ಯಾರಿಗೆ ನಿರಾಸೆ? ಎಂಬುದು ಇಂದಿನ ಬಜೆಟ್ನ ಕಡೆಯಲ್ಲಿ ಸ್ಪಷ್ಟವಾಗಲಿದೆ,(ಏಜೆನ್ಸೀಸ್).