MUDA Scam; ನನ್ನ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿಲ್ಲ ಎಂದ ಸಿಎಂ ಸಿದ್ದರಾಮಯ್ಯ

Siddaramaiah
Published on

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್​ ಅನುಮತಿಯನ್ನು ಹೈಕೋರ್ಟ್​ ಎತ್ತಿ ಹಿಡಿದಿದ್ದು, ಸಿಎಂ ಸಿದ್ದರಾಮಯ್ಯ ದೊಡ್ಡ ಹಿನ್ನೆಯಾಗಿದೆ ಎಂದರೆ ತಪ್ಪಾಗಲಾರದು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನಿರ್ಧಾರಕ್ಕೆ ಕೌಂಟರ್​ ಕೊಡಲು ಸಿಎಂ ಸುಪ್ರೀಂ ಸಜ್ಜಾಗಿದ್ದು, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ.

ತಮ್ಮ ವಿರುದ್ಧ ಹೈಕೋರ್ಟ್​ ನೀಡಿರುವ ತೀರ್ಪಿನ ಕುರಿತು ಮಾತನಾಡಿರುವ ಸಿಎಂ, ಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ. ಅದನ್ನು ತಿರಸ್ಕಾರ ಮಾಡಿದ್ದಾರೆ. 17ಎ ಪಿಸಿ ಆಕ್ಟ್ ಪ್ರಕಾರ ತನಿಖೆಗೆ ಕೊಟ್ಟಿದ್ದಾರೆ. ಇದು ಅಭಿಯೋಜನೆಯಲ್ಲ ಎಂದು ಹೇಳಿದ್ದಾರೆ.

ನಾನು ಹಾಕಿದ್ದ ರಿಟ್ ಅರ್ಜಿ ಮೇಲೆ ನ್ಯಾಯಾಧೀಶರು ಆದೇಶವನ್ನು ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿದ್ದೆ. ಅದರ ಮೇಲೆ ಪರ-ವಿರೋಧ ವಾದ ನಡೆಯಿತು. ಮಾಧ್ಯಮಗಳ ಮೂಲಕ ನಾನು ಆದೇಶವನ್ನು ನೋಡಿದ್ದೇನೆ. ಜಡ್ಜ್​ಮೆಂಟ್​ ಓದಿದ ನಂತರ ಪೂರ್ಣ ಪ್ರತಿಕ್ರಿಯೆ ನೀಡುವೆ. 17ಎ ಹಾಗೂ 19ಪಿಸಿ ಆ್ಯಕ್ಟ್​ ಮೇಲೆ ಅನುಮತಿ ಕೊಡಿ ಎಂದು ದೂರುದಾರರು ಕೇಳಿದ್ದರು. ನ್ಯಾಯಾಲಯ 17Aಗೆ ಸೀಮಿತಿಗೊಳಿಸಿ 218 ಸೆಕ್ಷನ್ಅನ್ನು ಬಿಎನ್‌ಎಸ್‌ಎಸ್ ಅಡಿಯಲ್ಲಿ ಅದನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲ. ಅದನ್ನು ತಿರಸ್ಕಾರ ಮಾಡಿದ್ದಾರೆ. 17ಎ ಪಿಸಿ ಪ್ರಕಾರ ತನಿಖೆಗೆ ಕೊಟ್ಟಿದ್ದಾರೆ. ಇದು ಅಭಿಯೋಜನೆಯಲ್ಲ.

ಯಾವ ರೀತಿ ಹೋರಾಟ ಮಾಡಬೇಕೆಂದು ಕಾನೂನು ತಜ್ಞರ ಜತೆ ಚರ್ಚೆ ಮಾಡುವೆ. ಮುಂದಿನ‌ಕ್ರಮ ನಿರ್ಧರಿಸುವೆ. ನಾನು ಮಂತ್ರಿ ಮಂಡಲ ಹಾಗೂ ಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ಮಾಡ್ತೇನೆ. ಬಿಜೆಪಿ, ಜೆಡಿಎಸ್‌ನವರ ಸಂಚು, ಒಳಸಂಚು ರಾಜಭವನ ದುರ್ಬಳಕೆಗೆ ಹೆದರಲ್ಲ. ಕರ್ನಾಟಕದ ಜನ‌ ನಮ್ಮ‌‌ಪಕ್ಷದ ಜತೆ ಇದ್ದಾರೆ. ಜನರ ಆಶೀರ್ವಾದ ನಮ್ಮ‌ಮೇಲಿದೆ. ನನ್ನ ಜತೆ ಡಿಸಿಎಂ ಸಹಿತ ಸಚಿವರು, ಶಾಸಕರು, ಕಾರ್ಯಕರ್ತರು, ಹೈಕಮಾಂಡ್ ಇದ್ದಾರೆ. ಕಾನೂನು ಹೋರಾಟ ಮಾಡಲು ಎಲ್ಲರೂ ಸಹಕಾ‌ರ‌ ನೀಡುತ್ತಿದ್ದಾರೆ.

ಮೋದಿ ಸರ್ಕಾರ ಇಡೀ ದೇಶದಲ್ಲಿ ಸೇಡಿನ‌ ರಾಜಕಾರಣ ಮಾಡುತ್ತಿದೆ. ಬಿಜೆಪಿ- ಜೆಡಿಎಸ್ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿಲ್ಲ.‌ ಮೊನ್ನೆ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಯಾವಾಗಲೂ ಅಧಿಕಾರಕ್ಕೆ ಬಂದಿದ್ದು ಹಿಂಬಾಲಿಗಿನಿಂದ, ಹಣಬಲದಿಂದ, ಆಪರೇಷನ್ ಕಮಲದ‌ ಮೂಲಕ.ನಾವು 136 ಸ್ಥಾನ ಗೆದ್ದ ಮೇಲೆ ಆಪರೇಷನ್ ಕಮಲ‌ ಮಾಡಲು ಆಗಲ್ಲ, ಪ್ರಯತ್ನ ಮಾಡಿದರು. ದುಡ್ಡು ಕೊಟ್ಟು ಶಾಸಕರನ್ನು ಕೊಳ್ಳಲು ಪ್ರಯತ್ನಿಸಿದರು. ನಮ್ಮ‌ ಶಾಸಕರು ದುಡ್ಡಿನ‌ ಹಿಂದೆ ಬೀಳಲಿಲ್ಲ. ನಮ್ಮ ಬಡವರ ಪರವಾದ ಕಾರ್ಯಕ್ರಮ ವಿರೋಧ ಮಾಡಿದರು.‌ ನಮ್ಮ‌ಗ್ಯಾರೆಂಟಿ ಯೋಜನೆಗೆ ವಿರೋಧ ಮಾಡಿದರು. ಈಗಲೂ ವಿರೋಧಿಸುತ್ತಿದ್ದಾರೆ. ಅವರು ಯಾವಾಗಲೂ ಸಾಮಾಜಿಕ‌ ನ್ಯಾಯಕ್ಕೆ ವಿರೋಧ ಇದ್ದಾರೆ. ಬಿಜೆಪಿಯವರು ಇಡೀ ದೇಶದಲ್ಲಿ‌ ಮಾಡಿದ ರೀತಿಯಲ್ಲೇ ನಮ್ಮ ಕಾಂಗ್ರೆಸ್ ಸರ್ಕಾರ ಅಲುಗಾಡಿಸಬೇಕು, ಕೆಟ್ಟ ಹೆಸರು ತರಬೇಕು, ಕಪ್ಪು‌ಮಸಿ ಬಳಿಯಬೇಕೆಂದು ಸಂಚು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net