ದಾಸೋಹ ದಿನದ ಬಗ್ಗೆ ನನಗೆ ಗೊತ್ತಿಲ್ಲ: ಸಿಎಂ

ವಿಜಯವಾಣಿ - 2024-01-21T164126.123
Published on

ತುಮಕೂರು: ಜನವರಿ 21 ದಾಸೋಹ ದಿನ ಆಚರಣೆ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ದಾಸೋಹ ದಿನ ಎಂದರೆ ಏನೆಂದು ಗೊತ್ತಿಲ್ಲ. ಐ ಡೋಂಟ್​ ನೋ ಎಂದಿದ್ದಾರೆ. ‌ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನ ಎಂದು ಅಂದಿನ ಸರ್ಕಾರ ಘೋಷಣೆ ಮಾಡಿತ್ತು ಎಂದಾಗ, ಹಿಂದಿನ ಸರ್ಕಾರ ಮಾಡಿದ್ದೆಲ್ಲವನ್ನೂ ನಾವು ಒಪ್ಪಿಕೊಳ್ಳಬೇಕಾ ಎಂದು ಹೇಳಿದರು.

ಇನ್ನು ಮಾತು ಮುಂದುವರೆಸಿದ ಸಿಎಂ, ನಾಳೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಎಲ್ಲಾ ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ಸರ್ಕಾರಿ ರಜೆ ಘೋಷಣೆ ಮಾಡೋದಿಲ್ಲ. ನಾಳೆ ಮಹದೇವಪುರದಲ್ಲಿ ನಿರ್ಮಾಣವಾಗುತ್ತಿರುವ ರಾಮ ದೇವಸ್ಥಾನಕ್ಕೆ‌ ಆಹ್ವಾನ ಕೊಟ್ಟಿದ್ದಾರೆ ಹೋಗುತ್ತಿದ್ದೇನೆ ಎಂದರು.

ಬೆಂಗಳೂರಿನಲ್ಲಿರುವ ರೇಸ್ ಕೋರ್ಸ್ ಅನ್ನು ಕುಣಿಗಲ್​ಗೆ ಶಿಫ್ಟ್ ಮಾಡಲು ಸಲಹೆ ನೀಡಿದ್ದೇನೆ ಎಂದ ಸಿಎಂ, ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಪ್ರತಿಕ್ರಿಯಿಸಿ, ಒಂದು ಕ್ವಿಂಟಾಲ್ ಕೊಬ್ಬರಿ‌ಗೆ 1,500 ರೂ. ಹೆಚ್ಚು ಹಣ ನೀಡಲು ಸರ್ಕಾರ ನಿರ್ಧರಿಸಿದೆ ಅದರಂತೆ ಕೊಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net