ಕೇಂದ್ರದಲ್ಲಿ ಬಿಜೆಪಿ ನೀಡಿದ್ದ ಪ್ರಣಾಳಿಕೆಯಲ್ಲಿ ಎಷ್ಟು ಜಾರಿಯಾಗಿದೆ: ಬಿಜೆಪಿಗೆ ಚಾಟಿ ಬೀಸಿದ ಸಿಎಂ

CM Siddaramaiah
Published on

ಬೆಂಗಳೂರು: ಚುನಾವಣೆ ವೇಳೆ ನೀಡಿದ ಭರವಸೆಯಂತೆ ಮೊದಲ ಗ್ಯಾರೆಂಟಿ ಭಾನುವಾರ ಜಾರಿಯಾಗುತ್ತಿದೆ, ಕೇಂದ್ರದಲ್ಲಿ ಬಿಜೆಪಿ ನೀಡಿದ್ದ ಪ್ರಣಾಳಿಕೆಯಲ್ಲಿ ಎಷ್ಟು ಜಾರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಭರವಸೆ ಎಷ್ಟು ಈಡೇರಿವೆ, ಅದರ ಬಗ್ಗೆ ಚರ್ಚೆಯಾಗಿದೆಯೇ? ನಾವು ನುಡಿದಂತೆ ನಡೆಯುವವರು. ಭಾನುವಾರ ಶಕ್ತಿ ಯೋಜನೆ ಜಾರಿಗೆ ಬರುತ್ತಿದೆ ಎಂದು ಹೇಳಿದರು.

ಗೃಹಜ್ಯೋತಿ, ಗೃಹ ಲಕ್ಷ್ಮೀ ಯೋಜನೆ ಎಲ್ಲ ಗೊಂದಲ ನಿವಾರಣೆಯಾಗಿದೆ. ನಾವು ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಪ್ರಣಾಳಿಕೆಯಲ್ಲಿ ಎಷ್ಟು ಅನುಷ್ಠಾನವಾಗಿದ್ದವು? ಅದರ ಬಗ್ಗೆ ಚರ್ಚೆಯಾಗಿತ್ತೆ ಎಂದು ಪ್ರಶ್ನಿಸಿದರು.

ತಮ್ಮ ಸ್ವಂತ ಜಿಲ್ಲೆಗೆ ತೆರಳುತ್ತಿರುವುದಾಗಿ ತಿಳಿಸಿದ ಅವರು, ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಅವರೊಂದಿಗೆ ಊಟ ಮಾಡುತ್ತಿರುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net