ಕಾಮೆಡ್ ಕೆ ಫಲಿತಾಂಶ ಪ್ರಕಟ: ಬೆಂಗಳೂರಿನ ನಂದ ಗೋಪಿ‌ ಕೃಷ್ಣ ಮೊದಲ ರ‍್ಯಾಂಕ್‌​

comed k gopi
Published on

ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು ಇಂದು 2023ರ ಕಾಮೆಡ್​ ಕೆ ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಬೆಂಗಳೂರಿನ ಎನ್. ನಂದ ಗೋಪಿ ಕೃಷ್ಣ ಈ ಪರೀಕ್ಷೆಯಲ್ಲಿ ಮೊದಲನೇ ರ‍್ಯಾಂಕ್‌ ಪಡೆದಿದ್ದಾರೆ.

COMEDK UGET ಪ್ರವೇಶ ಪರೀಕ್ಷೆಯನ್ನು 2023ರ ಮೇ 28ರಂದು ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ.

ಕಾಮೆಡ್​ ಕೆ ಫಲಿತಾಂಶ ನೋಡುವುದು ಹೇಗೆ?
ಅಭ್ಯರ್ಥಿಗಳು ಮುಂದಿನ ಹಂತಗಳನ್ನು ಅನುಸರಿಸುವ ಮೂಲಕ ಕಾಮೆಡ್​ ಕೆ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. ಕಾಮೆಡ್​ ಕೆನ ಅಧಿಕೃತ ಸೈಟ್‌ Comedk.orgಗೆ ಭೇಟಿ ನೀಡಿ. ಮುಖಪುಟದಲ್ಲಿ ಲಭ್ಯವಿರುವ COMEDK ಫಲಿತಾಂಶ 2023 ಲಿಂಕ್​ ಮೇಲೆ ಕ್ಲಿಕ್ ಮಾಡಿ. ಲಾಗಿನ್ ವಿವರಗಳನ್ನು ನಮೂದಿಸಿದರೆ, ನಿಮ್ಮ ಫಲಿತಾಂಶ ಪರದೆಯ ಪ್ರಕಟವಾಗುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net