ಬೆಂಗಳೂರಲ್ಲಿ ಇಂದು & ನಾಳೆ ಪವರ್ ಕಟ್: ನಿಮ್ ಏರಿಯಾ ಕೂಡ ಇದೆಯಾ ಈಗಲೇ ಪರೀಕ್ಷಿಸಿ..

power cut1
Published on

ಬೆಂಗಳೂರು: ಸಿಲಿಕಾನ್ ಸಿಟಿಯ ಹಲವೆಡೆ ಇಂದಿನಿಂದ ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿದು ಬಂದಿದೆ.

ಬೆಸ್ಕಾಂ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್​ ವ್ಯತ್ಯಯವಾಗುತ್ತಿದ್ದು, ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್​ ಪೂರೈಕೆಯಲ್ಲಿ ಕಡಿತವಾಗಲಿದೆ.

ಯಾವ ಯಾವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?
ಬೆಂಗಳೂರು ನಗರದ ಬೈರೋಹಳ್ಳಿ, ರಾಮೋಹಳ್ಳಿ, ಕೆಂಗೇರಿ ಟೌನ್, ಬಿಡದಿ ಗ್ರಾಮಾಂತರ, ದೇವಿಕಿರಣ್, ಡೆಕ್ಕನ್ ಹೆರಾಲ್ಡ್, ಕೆಎಐಡಿಬಿ 1ನೇ ಹಂತ, ಕೆಎಐಡಿಬಿ 2ನೇ ಹಂತ, ಗೇರುಪಾಳ್ಯ ಕೈಗಾರಿಕಾ ಪ್ರದೇಶ, ಇಸ್ರೋ, ಗೋಣಿಪುರ, ಬಿಜಿಎಸ್, ಕೆಂಗೇರಿ, ಬ್ರಿಗೇಡ್ ಪನೋರಮಾ, ಶ್ರೀರಾಮ ಬಡಾವಣೆ, ಕಣ್ಮಿಣಿಕೆ, ಸಂದೀಪ್ ತೋಟ, ಡೈಮಂಡ್ ಡಿಸ್ಟ್ರಿಕ್ಟ್ 1 ಮತ್ತು 2, ಕೋಡಿಹಳ್ಳಿ, ಯಲಾಪುರ, ಸಾಗರನಹಳ್ಳಿ, ಎಂ ಎಸ್ ಹಳ್ಳಿ, ಹೇಮಾವತಿ, ಬಂಡಿಹಳ್ಳಿ, ಬೊಮ್ಮೇನಹಳ್ಳಿ, ತ್ಯಾಗಟೂರು, ಬೆಣಚಿಗೆರೆ, ಹೆಸರಹಳ್ಳಿ, ಬೆಳವತ, ಮತ್ತಿಗಟ್ಟ, ಎಂ ಎನ್ ಕೋಟೆ, ರಾಂಪುರ, ನಿಟ್ಟೂರು ಪ್ರದೇಶಗಳಲ್ಲಿ ವಿದ್ಯುತ್​ ಕಡಿತವಾಗಲಿದೆ.

ಜತೆಗೆ ಸೋಪನಹಳ್ಳಿ, ಗುಬ್ಬಿ, ಬಿದರೆ, ಕಲ್ಲೂರು, ಕೆಜಿ ದೇವಸ್ಥಾನ, ಸೋಮಲಾಪುರ, ಗುಡ್ಡದಹಳ್ಳಿ, ಕಗ್ಗೆರೆ, ರಂಗನಾಥಪುರ, ಗೌರಿಪುರ, ಎಂಎಸ್ ಪಾಳ್ಯ, ಕಾಶಿಮಠ, ಮುನಿಯಪ್ಪನಪಾಳ್ಯ, ಗುಬ್ಬಿ ಟೌನ್, ಹೇರೂರು, ಜಿ ಹೊಸಹಳ್ಳಿ, ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಮಿತಿ, ಗೋಪಾಲಪುರ, ಜಿ.ಹೊಸಹಳ್ಳಿ, ಟಿ. ತೊರೆಹಳ್ಳಿ, ಮಾದಾಪುರ, ಕೊಡಿಗೇನಹಳ್ಳಿ, ಕೊಪ್ಪ, ಹೇರೂರು, ಎಂ ಎಚ್ ಪಟ್ಣ, ಉದ್ದೆಹೊಸಕೆರೆ, ಹೊನ್ನವಳ್ಳಿ, ಬಿದ್ರೆ, ಅಮ್ಮನಘಟ್ಟ, ಗುಬ್ಬಿ ಟೌನ್, ಕೆಎಂಎಫ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net